ಬಂಟ್ವಾಳ,ಜ 10 (MSP): ಮಂಗಳೂರು - ವಿಲ್ಲಂಪುರ ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನಿಂದ ಪುಂಜಾಲಕಟ್ಟೆ ಯವರೆಗೆ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಗೆ ಅಡಚಣೆಯಾಗುವ ರಸ್ತೆ ಬೀದಿಯಲ್ಲಿ ರುವ ಮರಗಳನ್ನು ತೆರವು ಗೊಳಿಸುವ ಬಗ್ಗೆ ಅರಣ್ಯ ಇಲಾಖೆಯ ವತಿಯಿಂದ ಸಾರ್ವಜನಿಕ ಅಹವಾಲು ಸ್ವೀಕರ ಸಭೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಮಂಗಳೂರು ಉಪ ಅರಣ್ಯ ಸಂರಕ್ಷಣಾ ಧಿಕಾರಿ ಡಾ| ಕರಿಕಲನ್ ಅವರ ಅಧ್ಯಕ್ಷ ತೆಯಲ್ಲಿ ಜರುಗಿತು.
ರಾಷ್ಟ್ರೀಯ ಹೆದ್ದಾರಿ 75 ಇದರಲ್ಲಿ 17.6 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ದ ವೇಳೆ ಒಟ್ಟು 1106 ಮರಗಳನ್ನು ಕಡಿಯಲು ಒಪ್ಪಿಗೆ ಪಡೆಯವ ಉದ್ದೇಶದಿಂದ ಅಧಿಕಾರಿಗಳು ಈ ಸಭೆ ಅಯೋಜಿಸಿದ್ದರು. ಈ ಸಭೆಯಲ್ಲಿ ರಸ್ತೆ ಮತ್ತು ಖಾಸಗಿ ಜಮೀನಿನಲ್ಲಿರುವ ಮರಗಳ ತೆರವು ಕಾರ್ಯ ಮಾಡಲು ಯಾವಲ್ಲಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಿತು. ರಸ್ತೆ ಕಾಮಗಾರಿ ಯ ಉದ್ದೇಶದಿಂದ ಕಡಿಯುವ ಮರಗಳಿಗೆ ತಗಲುವ ವೆಚ್ಚವನ್ನು ಇಲಾಖೆಯಿಂದ ಪಡೆಯಲಾಗುತ್ತದೆ ಮತ್ತು ಮುಂದಿನ ವರ್ಷ ಸಸಿಗಳನ್ನು ನೆಡಲು ಕ್ರಮಗಳನ್ನು ಕೈಗೊಳ್ಳುವ ನಿರ್ಧಾರ ಮಾಡಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮತ್ತು ಅಭಿವೃದ್ಧಿ ಯ ಉದ್ದೇಶದಿಂದ ಮಾಡುವ ಈ ಕಾಮಗಾರಿ ನಡೆಯಲು ಮರಗಳನ್ನು ಕಡಿಯುವುದಕ್ಕೆ ವಿರೋಧ ವಿಲ್ಲ ಎಂಬ ಅಭಿಪ್ರಾಯ ಸಭಿಕರಿಂದ ಬಂತು. ಆದರೆ ರಸ್ತೆ ಅಭಿವೃದ್ಧಿ ಸಂಧರ್ಭದಲ್ಲಿ ತಿರುಗಳವುಗಳನ್ನು ಸರಿಮಾಡಿಕೊಂಡು ಉತ್ತಮ ದರ್ಜೆಯ ರಸ್ತೆ ನಿರ್ಮಾಣ ಮಾಡಲು ಸಭೆಯಲ್ಲಿ ಭಾಗವಹಿಸದವರ ಅಹವಾಲು ಆಗಿತ್ತು. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇ ಗೌಡ, ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಉಪವಲಯ ಅರಣ್ಯಾಧಿಕಾರಿ ಪ್ರೀತಮ್ ಎಸ್, ಅನಿಲ್, ಸಿಬ್ಬಂದಿ ವಿನಯ್, ಮನೋಜ್, ಲಕ್ಮೀನಾರಾಯಣ ಮತ್ತು ಸ್ಮಿತಾ ಅವರು ಉಪಸ್ಥಿತರಿದ್ದರು.