ಬಂಟ್ವಾಳ,ಜ 11(MSP): ಮಾರಿಪಳ್ಳ ಗ್ಯಾಸ್ ಏಜೆನ್ಸಿ ಯ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ನಗದು ಹಣವನ್ನು ದೋಚಿದ ಘಟನೆ ಜ. 11 ರ ಶುಕ್ರವಾರ ಮುಂಜಾನೆ ವೇಳೆ ನಡೆದಿದೆ.
ಬಂಟ್ವಾಳ ತಾಲೂಕಿನ ಕಡೆಗೋಳಿ ಸಮೀಪದ ಮಾರಿಪಳ್ಳದಲ್ಲಿರುವ ಪುಷ್ಪರಾಜ ಚೌಟ ಅವರ ಮಾಲೀಕತ್ವದ ಚೌಟ ಕಾಂಪ್ಲೆಕ್ಸ್ ನಲ್ಲಿರುವ ಚೌಟ ಇಂಡೆನ್ ಗ್ಯಾಸ್ ಏಜೆನ್ಸಿ ಅಂಗಡಿಗೆ ಕಿಟಕಿಯ ಸರಳುಗಳನ್ನು ಮುರಿದು ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್ ನಲ್ಲಿದ್ದ ಸುಮಾರು 2 ಲಕ್ಷ ಕ್ಕೂ ಅಧಿಕ ನಗದು ಮೊತ್ತ ವನ್ನು ಕಳವುಗೈದಿದ್ದಾರೆ.
ಸ್ಥಳಕ್ಕೆ ಶ್ವಾನಧಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದಂತೆ ಸ್ಥಳಕ್ಕೆ ಬಂಟ್ವಾಳ ವೃತ್ರ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ಎಸ್.ಐ ಪ್ರಸನ್ನ, ಸಿಬ್ಬಂದಿ ಗಳಾದ ಸುರೇಶ್, ಜನಾರ್ಧನ, ವರ್ಗೀಸ್ ಮತ್ತಿತರರು ಬೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.