ಮೈಸೂರು ಅ24: ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಎಸ್.ಜಾನಕಿ ಇನ್ನು ಕೆಲವೇ ದಿನಗಳಲ್ಲಿ ತಮ್ಮ ಹಾಡುಗಾರಿಕೆಯನ್ನು ನಿಲ್ಲಿಸಲಿದ್ದಾರೆ. ಈ ವಾರ ಮೈಸೂರಿನಲ್ಲಿ ನಡೆಯುವ ಸಂಗೀತ ಕಾರ್ಯಕ್ರಮ ತಮ್ಮ ಸಂಗೀತ ಜೀವನದ ಕೊನೆಯ ಕಾರ್ಯಕ್ರಮವಾಗಲಿದೆ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ. ತಮ್ಮ ಅರುವತ್ತು ವರ್ಷಗಳ ಸುಧೀರ್ಘ ಚಲನಚಿತ್ರ ಹಿನ್ನಲೆ ಗಾಯನಕ್ಕೆ ಕಳೆದ ವರ್ಷವಷ್ಟೇ ಅವರು ವಿದಾಯ ಹೇಳಿದ್ದರು
ಹದಿನೇಳು ಭಾಷೆಗಳಲ್ಲಿ ನಲ್ವತ್ತು ಸಾವಿರಕ್ಕಿಂತಲೂ ಹಾಡೂಗಳನ್ನು ಹಾಡಿದ ಜಾನಕಿಯಮ್ಮ,ಉದಯೋನ್ಮುಖ ಗಾಯಕರಾದ ಮಿಥುನ್ ಈಶ್ವರ್ ರವರೊಂದಿಗೆ ಹಾಡಿದ ನಂತರ ಸಿನೆಮಾ ಹಾಡುಗಳ ಹಾಡುಗಾರಿಕೆಗೆ ವಿದಾಯ ಹೇಳಿದ್ದರು. ಮಕ್ಕಳಂತೆ ಪ್ರೀತಿಸುವ ಮೂವರು ಕನ್ನಡ ಅಭಿಮಾನಿಗಳಿಗಾಗಿ ಜಾನಕಿಯಮ್ಮ ಇದೀಗ ಮೈಸೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಸಾಮನ್ಯ ಜನರ ಸಂಗೀತವಾದ ಸಿನೆಮಾ ಹಾಡುಗಳೊಂದಿಗೆ ಜೀವಿಸಿದ ಜಾನಕಿಯಮ್ಮ ವಿದಾಯ ಕಾರ್ಯಕ್ರಮಗಳಿಗೆ ಎಲ್ಲಿಯೂ ಆಡಂಬರತೆಯನ್ನು ಪ್ರದರ್ಶಿಸಲು ತಯಾರಾಗಿಲ್ಲ.
’ವಿಧಿಯಿನ್ ವಿಳಯಾಡ್’ ಹಾಡಿನ ಮೂಲಕ ಜಾನಕಿಯಮ್ಮ ಸಿನೆಮಾ ಗೀತೆಗಳ ಲೋಕಕ್ಕೆ ಪಾದರ್ಪನೆಗೈದಿದ್ದರು. ಕನ್ನಡ ಸಿನೆಮಾ’ಹೇಮವತಿ’ ಯ’ಶಿವ ಶಿವ ಎನ್ನದ ನಾಲಿಗೆಯೇಕೆ’ ಎಂಬ ಹಾಡು ತನ್ನ ಇಡೀ ವ್ರತ್ತಿ ಜೀವನದಲ್ಲಿ ಅತೀ ಕ್ಲಿಷ್ಟಕರವಾದ ಹಾಡಾಗಿತ್ತು ಎಂದು ಒಂದು ಸಂದರ್ಶಣದಲ್ಲಿ ಜಾನಕಿಯಮ್ಮ ನುಡಿದಿದ್ದರು.