ಪಡುಬಿದ್ರೆ, ಜ11(MSP): ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಿಳಂಬ ನೀತಿ ಮತ್ತು ಟೋಲ್ ಗುತ್ತಿಗೆದಾರ ನವಯುಗ ಕಂಪನಿಯ ವಿರುದ್ಧ ಅನಿರ್ದಿಷ್ಟ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ.ಪಡುಬಿದ್ರಿ ಜಂಕ್ಷನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಗೆ ದಿನದಿಂದ ದಿನಕ್ಕೆ ಬೇರೆ ಬೇರೆ ಸಂಘಟನೆ ಮಂದಿ ಸೇರಿ ಪ್ರತಿಭಟನೆ ಕಾವು ಹೆಚ್ಚಾಗತೊಡಗಿದೆ.
ಪ್ರತಿಭಟನೆ ಐದನೇ ದಿನಕ್ಕೆ ಕಾಲಿರಿಸಿದರೂ ಜಿಲ್ಲಾಡಳಿತ ಆಗಲೀ ನವಯುಗ ಕಂಪನಿಯವರಾಗಲೀ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ರೊಚ್ಚಿಗೆದ್ದು ರಾತ್ರಿ ಹಗಲು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಮುಂದುವರಿದ ಪ್ರತಿಭಟನೆಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್. ಡಿ. ಪಿ. ಐ) ದ ರಾಜ್ಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಮಾತನಾಡಿ ನವಯುಗ ಕಂಪನಿಯ ಜೊತೆ ಪೋಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕೈ ಜೋಡಿಸಿಕೊಂಡು ಪ್ರತಿಭಟನಾಕಾರರ ದಿಕ್ಕು ತಪ್ಪಿಸಿ ದಮನಿಸುವ ನೀತಿ ಮಾಡುತ್ತಿದೆ.
ಇವರು ಇತರ ಪ್ರತಿಭಟನಾಕಾರರನ್ನು ಆಮಿಷ ತೋರಿಸಿ ಕುಳ್ಳಿರಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಯ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಒಂದು ವೇಳೆ ನಮ್ಮ ಬೇಡಿಕೆ ಗಳನ್ನು ಸ್ಪಂದಿಸದೇ ಪ್ರಯತ್ತಿಸಿದಲ್ಲಿ ಆವರು ಘೋರ ಪರಿಣಾಮಗಳ ನ್ನು ಎದುರಿಸಬೇಕಾಗಿ ಬಂದೀತು ಎಂದು ಎಚ್ಚರಿಸಿದ್ದಾರೆ