ಮಂಗಳೂರು ಅ24: ಕೊಲೆ, ಗಾಂಜಾ ದಂಧೆ ಸಹಿತ, ಮನೆ ಹಾಗೂ ಅಂಗಡಿ ಧ್ವಂಸಗೈದ ಪ್ರಕರಣದ ಆರೋಪಿಯನ್ನು ಸಾರ್ವಜನಿಕರು ಸೇರಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಪೋಲಿಸರ ಸಮ್ಮುಖದಲ್ಲೇ ನಿನ್ನೆ ತಡರಾತ್ರಿ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾರ್ವಜನಿಕರ ಆಕ್ರೋಶಕ್ಕೆ ಬಲಿಯಾದ ವೆಕ್ತಿಯನ್ನು ಅಬ್ದುಲ್ ಮುತ್ತಲೀಬ್ ಅಲಿಯಾಸ್ ಮುತ್ತು(22)ಎಂದು ಗುರುತಿಸಲಾಗಿದೆ. ಸಾಕಷ್ಟು ವಾದ ವಿವಾದಗಳಿಗೆ ಕಾರಣವಾದ ರಾಜು ಕೋಟ್ಯಾನ್ ಹತ್ಯೆಯಲ್ಲಿ ಆರೋಪಿತನಾದ ಈತ ಕೆಲ ಸಮಯದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು. ಜೈಲಿನಿಂದ ಹೊರಬಂದ ನಂತರವೂ ಸಾರ್ವಜಣಿಕರಿಗೆ ಹಾಗೂ ಸ್ಥಳೀಯರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ಈತ ಕೆಲ ದಿನಗಳ ನಂತರ ಭೂಗತ ನಾಗಿದ್ದನು.
ನಿನ್ನೆ ರಾತ್ರಿ ಮುತ್ತಲೀಬ್ ಮರಳಿ ಮನೆಗೆ ಬಂದಿದ್ದಾನೆ ಎಂದು ತಿಳಿದ ಸಾರ್ವಜಣಿಕರು ಬಹುದೊಡ್ಡ ಸಂಖ್ಯೆಯಲ್ಲಿ ಆತನ ಮನೆಮುಂದೆ ಸೇರಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಉಲ್ಲಾಲ ಠಾಣಾ ಪೋಲಿಸ್ ಅಧಿಕಾರಿಗಳು ಮುತ್ತಲೀಬನನ್ನು ಸುರಕ್ಷಿತವಾಗಿ ಪೋಲಿಸ್ ಠಾಣೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರದರೂ ಸುಮಾರು ಮುನ್ನೂರರಷ್ಟಿದ್ದ ಸಾರ್ವಜಣಿಕರು ಆತನ ಮೇಲೆ ಮುಗಿಬಿದ್ದಿದ್ದಾರೆ.
ಆಕ್ರಮಣದಲ್ಲಿ ಗಾಯಗೊಂಡ ಮುತ್ತಲೀಬ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಧಾಕಲಾಗಿದ್ದಾರೆ. ನೂಕುನುಗ್ಗಲಿನಲ್ಲಿ ಪೋಲಿಸ್ ಪೇದೆಯೋರ್ವರೂ ಗಾಯಗೊಂಡಿದ್ದಾರೆ.