ಮಂಗಳೂರು, ಜ 13(MSP): ತುಳುನಾಡಿನಾದ್ಯಂತ ಬಹು ನಿರೀಕ್ಷೆ ಹುಟ್ಟಿಸಿರುವ, ಹಾಡುಗಳ ಹಾಗೂ ಟೀಸರ್ ನಲ್ಲೇ ಕುತೂಹಲ ಕೆರಳಿಸಿರುವ ತುಳು ಭಾಷೆಯಲ್ಲಿ ತಯಾರಾದ ಚಲನಚಿತ್ರ “ಕಂಬಳಬೆಟ್ಟು ಭಟ್ರೆನ ಮಗಲ್”, ಫೆ.22 ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಸಕ ಶರತ್ ಎಸ್ ಪೂಜಾರಿ ಬಗ್ಗತೋಟ ಹೇಳಿದರು.
ಪ್ರಥಮ ಹಂತದಲ್ಲಿ ತುಳುನಾಡಿನಾದ್ಯಂತ ಬಿಡುಗಡೆಯಾಗಲಿರುವ ಚಿತ್ರ ದ್ವಿತೀಯ ಹಂತದಲ್ಲಿ ದುಬೈ ಬಹರೈನ್ ಕತಾರ್ ಹಾಗೂ ತೃತೀಯ ಹಂತದಲ್ಲಿ ಮುಂಬೈ,ಪುಣೆ ಮುಂತಾದೆಡೆ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಐಶ್ವರ್ಯಾ ಎ. ಆಚಾರ್ಯ ನಾಯಕಿ. ಶೈಲೇಶ್, ಶರತ್, ಪ್ರದೀಪ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದು. ಉಳಿದಂತೆ ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸತೀಶ್ ಬಂದಲೆ, ದೀಪಕ್ ರೈ ಪಾಣಾಜೆ, ಪ್ರಕಾಶ್ ಪೂಂಜಾ, ಚಿದಾನಂದ ಅದ್ಯಪಾಡಿ ಚಿತ್ರದಲ್ಲಿದ್ದಾರೆ. ರಮೇಶ್ ರೈ ಕುಕ್ಕುವಳ್ಳಿ ಖಳನಟರಾಗಿ ಮಿಂಚಲಿದ್ದಾರೆ ಎಂದು ಅವರು ವಿವರಿಸಿದರು.
ಆ ಬಳಿಕ ಮಾತನಾಡಿದ ನಿರ್ಮಾಪಕರಾದ ರೊನಾಲ್ಡ್ ಮಾರ್ಟಿಸ್ ಸಾಮಾಜಿಕ ಚಿಂತನೆಗಳನ್ನೊಳಗೊಂಡ,ಮಹಿಳಾ ಪ್ರಧಾನ ಹಾಗೂ ತುಳುನಾಡಿನ ಪ್ರತೀ ಹೆಣ್ಣು ಮಗಳು,ಕುಟುಂಬ ಸಮೇತರಾಗಿ ಯಾವುದೇ ಮುಜುಗರ ಇಲ್ಲದೆ ನೋಡಬಹುದಾದ ಚಲನಚಿತ್ರವಾಗಿದೆ ಎಂದು ತಿಳಿಸಿದರು. ತುಳು ಚಿತ್ರ ಬಿಡುಗಡೆಯಾಗಿ ಎರಡು ಅಥವಾ ಮೂರು ತಿಂಗಳಲ್ಲಿ ಅವೃತ್ತಿ ಬಿಡುಗಡೆಯಾಗಲಿದೆ. ತುಳು ಹಾಗೂ ಕನ್ನಡ ಆವೃತ್ತಿಗಳಿಗಾಗಿ ಚಿತ್ರೀಕರಣ ಸಂದರ್ಭದಲ್ಲೇ ಎರಡೆರಡು ರೀತಿಯ ಚಿತ್ರೀಕರಣ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭ ನಿರ್ಮಾಣ ಮತ್ತು ನಿರ್ವಹಣ್ ಜವಬ್ದಾರಿ ಹೊಂದಿರುವ ಪ್ರಕಾಶ್ ಗಟ್ಟಿ ಉಪಸ್ಥಿತರಿದ್ದರು.