ಮಂಗಳೂರು, ಜ 13(MSP): ಶಬರಿಮಲೆಗೆ ತೆರಳುತ್ತಿದ್ದ ಇಬ್ಬರು ಯುವತಿಯರು ಹಾಗೂ ಒಬ್ಬ ಮಹಿಳೆಯನ್ನು ಚೆಂಗನ್ನೂರು ಸಮೀಪ ಅಯ್ಯಪ್ಪ ವ್ರತಧಾರಿಗಳು ತಡೆದ ಘಟನೆ ಶನಿವಾರ ಸಂಜೆ ನಡೆದಿದೆ.
ರೈಲಿನಲ್ಲಿ ತೆರಳಲು ಚೆಂಗನ್ನೂರಿಗೆ 20 ವರ್ಷದ ಇಬ್ಬರು ಯುವತಿಯರು ಮತ್ತು ೪೦ ವರ್ಷದ ಮಹಿಳೆ ಬಂದಿದ್ದರು. ಬಳಿಕ ಬಸ್ ನಲ್ಲಿ ಪಂಪಾಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾಗ ಗಮನಿಸಿದ ಅಯ್ಯಪ್ಪ ವ್ರತಧಾರಿಗಳು ತಡೆದು ವಿಚಾರಿಸಿದರು. ಈ ಸಂದರ್ಭ ವಾಗ್ವಾದ ಆರಂಭವಾಗಿದ್ದು ಆತಂಕಕ್ಕೆ ಒಳಗಾಗ ಇಬ್ಬರು ಯುವತಿಯರು ಅಲ್ಲಿಂದ ಪರಾರಿಯಾದರು. ಕೂಡಲೇ ಶ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದರು. ಚೆಂಗನ್ನೂರು ಪೊಲೀಶ್ ಠಾಣೆಯಲ್ಲಿ ಯುವತಿಯ ವಿಚಾರಣೆ ನಡೆಯುತ್ತಿದೆ. ಎಂದು ದ.ಕ ಜಿಲ್ಲೆಯಿಂದ ಸುರೇಶ್ ಕಾಪಿಕಾಡ್ ತಿಳಿಸಿದ್ದಾರೆ