ಮೈಸೂರು, ಜ 13(MSP): ಜೀವನದಲ್ಲಿ ಏನನ್ನೂ ಸಾಧಿಸಲು ಆಗಲಿಲ್ಲ, ನನ್ನನು ಯಾರು ಲೈಕ್ ಮಾಡುತ್ತಿಲ್ಲ ಎಂದು ಮನನೊಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮನನೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬನ್ನಿಮಂಟಪದ ಕಾವೇರಿನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಯಾಸ್ಮಿನ್ ತಾಜ್ (18) ಎಂದು ಗುರುತಿಸಲಾಗಿದೆ. ಈಕೆಗೆ ತಲೆಗೆ ಓದು ಹತ್ತುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
"ನಾನು ಎಷ್ಟೇ ಓದಬೇಕೆಂದುಕೊಂಡರೂ ಓದು ನನಗೆ ತಲೆಗೆ ಹತ್ತುತ್ತಿಲ್ಲ ನನಗೆ ಮುಂದೆ ಸಿಂಗರ್ ಅಥವಾ ಲಾಯರ್ ಯಾಗುವ ಆಸೆ ಇತ್ತು. ದೇವರು ನನ್ನ ಆಸೆ ಪೂರೈಸಲಿಲ್ಲ. ನನಗೆ ಆರೋಗ್ಯ ಸಮಸ್ಯೆ ಕೂಡ ಇದೆ. ಪ್ರಿಪರೇಟರಿ ಪರೀಕ್ಷೆಗೆ ಹಾಲ್ ಟಿಕೆಟ್ ಕೂಡ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾಳೆ.
ನನಗೆ ಜೀವನದಲ್ಲಿ ಯಾವುದೇ ಸಾಧನೆ ಮಾಡಲಾಗಿಲ್ಲ ಎನ್ನುವ ನೋವಿದೆ. ನಾನು ಬದುಕಿದ್ದಾಗ ಯಾರೂ ಲೈಕ್ ಮಾಡಿಲ್ಲ, ಈಗ ನಾನು ಸಾಯುವ ವೀಡಿಯೋ ಆದರೂ ಲೈಕ್ ಮಾಡಿ ಶೇರ್ ಮಾಡಿ. ಈ ಮೂಲಕ ಯಾಸ್ಮಿನ್ ಸತ್ತಳೆಂಬ ಸುದ್ದಿ ಎಲ್ಲರಿಗೆ ತಿಳಿಯಲಿ" ಎಂದು ತೆಲುಗಿನಲ್ಲಿ ಹೇಳಿರುವ ವೀಡಿಯೋ ಶೇರ್ ಮಾಡಿಕೊಂಡಿದ್ದಾಳೆ. ಘಟನೆ ಕುರಿತು ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.