ಉಡುಪಿ, ಜ 14 (MSP): ಉಡುಪಿ ಜಿಲ್ಲೆಯ ಇಬ್ಬರು ಹಾಗೂ ಉತ್ತರ ಕನ್ನಡದ ಐವರು ಮೀನುಗಾರರು ಬೋಟ್ ಸಹಿತ ನಾಪತ್ತೆಯಾಗಿ ಒಂದು ತಿಂಗಳೂ ಕಳೆದರೂ ಯಾವುದೇ ಸುಳಿವು ಸಿಗದಿರುವುದು ಪಶ್ಚಿಮ ಕರಾವಳಿ ಮೀನುಗಾರಿಕೆಯ ಇತಿಹಾಸ ದಲ್ಲಿಯೇ ಕರಾಳ ಘಟನೆ ಎನ್ನಲಾಗುತ್ತಿದೆ. ಪೊಲೀಸರು, ನೌಕಾಸೇನೆ, ಸ್ಥಳೀಯ ಮೀನುಗಾರರು, ಕರಾವಳಿ ರಕ್ಷಣಾ ಪಡೆ, ಹೆಲಿಕಾಪ್ಟರ್, ಸುಸಜ್ಜಿತ ಬೋಟ್ಗಳನ್ನು ಬಳಸಿ ಹುಡುಕಾಟ ನಡೆಸಿದರೂ ಮಾತ್ರ ಮೀನುಗಾರರ ಎಲ್ಲಿದ್ದಾರೆ ಎನ್ನುವ ಸ್ಪಷ್ಟ ಸುಳಿವು ಇನ್ನು ಲಭ್ಯವಾಗಿಲ್ಲ.
ಡಿ.13 ರಂದು ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಆಳಸಮುದ್ರ ಮೀನುಗಾರಿಕೆಗೆ ತೆರಳಿ ಬೋಟ್ ಸಮೇತ ಮೀನುಗಾರಿಕೆ ತೆರಳಿ ಬೋಟ್ ಸಮೇತ ಕಣ್ಮರೆಯಾಗಿದ್ದ 7ಮೀನುಗಾರರ ಹುಡುಕಾಟಕ್ಕಾಗಿ ಮೀನುಗಾರರೇ ಶೋಧ ಆರಂಭಿಸಿದ್ದಾರೆ. ಮಲ್ಪೆ ಬಂದರಿನಿಂದ ಹಂತ ಹಂತವಾಗಿ ಆಳ ಸಮುದ್ರ ಮೀನುಗಾರಿಕೆಗೆ ಬೋಟುಗಳು ತೆರಳಿವೆ. ಇವರೆಲ್ಲರೂ ಮೀನುಗಾರಿಕೆಗಿಂತ ಮೀನುಗಾರರು ಮತ್ತು ಬೋಟಿನ ಶೋಧ ಕಾರ್ಯಕ್ಕೆ ಆಧ್ಯತೆ ನೀಡಲಾಗಿದೆ. ಶನಿವಾರ ತಡರಾತ್ರಿ 150 ಬೋಟ್ ಗಳು ಕಡಲಿಗೆ ಇಳಿದಿದ್ದು, ಹುಡುಕಾಟ ನಡೆಸಿದರೂ ಯಾವ ಸುಳಿವು ಸಿಕ್ಕಿಲ್ಲ. ಈ ಮಧ್ಯೆ ಭಾನುವಾರ ಮತ್ತೆ 200 ಬೋಟ್ ಸಮುದ್ರಕ್ಕಿಳಿದಿವೆ.
ಇದೆಲ್ಲದರ ನಡುವೆ ಬೋಟು ನಾಪತ್ತೆಯಾದ ರಾತ್ರಿ ಎರಡು ಗಂಟೆಯ ಸುಮಾರಿಗೆ ಸಿಂಧುದುರ್ಗ, ರತ್ನಗಿರಿ ಭಾಗದ ಅರಬ್ಭಿ ಸಮುದ್ರದಲ್ಲಿ ಹಡಗೊಂದಕ್ಕೆ ಸುವರ್ಣ ತ್ರಿಭುಜ ಬೋಟ್ ನ ವಯರ್ ಲೆಸ್ ಕನೆಕ್ಟ್ ಆದ ಮೆಸೇಜ್ ರವಾನೆಯಾಗಿದೆ ಎಂಬ ಮಹತ್ವದ ಮಾಹಿತಿ ಲಭ್ಯವಾಗಿದೆ. ಈ ಆಕ್ಟಿವಿಟಿ ನೌಕಪಡೆ ಫ್ರೀಕ್ವೆನ್ಸಿಯಲ್ಲಿ ರೆಕಾರ್ಡ್ ಆಗಿದ್ದು, ಎರಡು ದೊಡ್ಡ ಹಡಗುಗಳು ಈ ಮಾರ್ಗದಲ್ಲಿ ಸಂಚರಿಸಿದ್ದವು ಎಂಬ ಮಾಹಿತಿ ಆಧರಿಸಿ ನೌಕಾಪಡೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಮಧ್ಯರಾತ್ರಿ 1 ರಿಂದ ಬೆಳಗ್ಗೆ 6 ಗಂಟೆಯವರೆಗೆ ಹಾದುಹೋದ ಎಲ್ಲಾ ಹಡಗುಗಳ ವಿವರ ಪರಿಶೀಲಿಸಲಾಗುತ್ತಿದ್ದು ಹಲವು ಆಯಾಮಗಳಲ್ಲಿ ನೌಕಾಪಡೆ ತನಿಖೆ ಮಾಡಲಿದೆ.