ಮಂಗಳೂರು, ಜ 14 (MSP): ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜಿಲ್ಲಾ ಯುವ ಕಾಂಗ್ರೆಸ್ ಗೆ ಟಿಕೆಟ್ ನೀಡಬೇಕು. ಮುಂಬರುವ ಚುನಾವಣೆಗಳಲ್ಲಿ ಯುವಜನತೆಯನ್ನು ಪರಿಗಣಿಸಬೇಕೆಂದು ಎಂದು ಜಿಲ್ಲಾ ಯುವ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿಯೂ , ಯುವ ಕಾಂಗ್ರೆಸ್ ನ ರಾಷ್ಟ್ರೀಯ ಕಾರ್ಯಕಾರಿ ಕಾರ್ಯದರ್ಶಿ, ಹಾಗೂ ರಾಜ್ಯ ಯುವ ಕಾಂಗ್ರೆಸ್ ನ ಉಸ್ತುವಾರಿ ಸಂದೀಪ್ ವಾಲ್ಮೀಕಿ ಅವರನ್ನು ಒತ್ತಾಯಿಸಿತು.
ಜ.13 ರಂದು ನಗರಕ್ಕೆ ಆಗಮಿಸಿದ್ದ ಅವರನ್ನು ಭೇಟಿಯಾದ ಜಿಲ್ಲೆಯ ಎಲ್ಲಾ ಬ್ಲಾಕ್ ನ ಯುವ ಕಾಂಗ್ರೆಸ್ ನ ಅಧ್ಯಕ್ಷರು, ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಯುವ ಮುಖಗಳಿಲ್ಲದೆ ಗೆಲುವು ಕಷ್ಟ ಸಾಧ್ಯ. ಯುವ ಮತ್ತು ಶಕ್ತಿಯುತ ಅಭ್ಯರ್ಥಿಯಾಗಿದ್ದ ಯು.ಟಿ ಖಾದರ್ ಅವರು ತಮ್ಮ ಸ್ಥಾನವನ್ನು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಯಶಸ್ವಿಯಾದರು. ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕನಿಷ್ಠ ಎರಡು ಸೀಟುಗಳನ್ನು ಬೇಡಿಕೆ ಮಾಡಿತ್ತು. ಆದರೆ ಅದನ್ನು ಪಡೆಯಲು ಯಶಸ್ವಿಯಾಗಲಿಲ್ಲ. ಆದ್ದರಿಂದ ಲೋಕಸಭಾ ಕ್ಷೇತ್ರದ ನಾಯಕತ್ವಕ್ಕೆ ಯುವ ಅಭ್ಯರ್ಥಿಯನ್ನು ಪರಿಗಣಿಸಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಒತ್ತಾಯಿಸಿದರು.
ಮುಂದುವರಿದು ಮಾತನಾಡಿದ ಅವರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಒಬ್ಬ ಉತ್ತಮ ಅಭ್ಯರ್ಥಿಯಾಗಿದ್ದಾರೆ ಎಂದು ಸಲಹೆ ಮಾಡಿ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ನೀಡಿದ ಸಲಹೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದ ಸಂದೀಪ್ ವಾಲ್ಮೀಕಿ ಅವರು, ರಾಜ್ಯ ಹಾಗೂ ರಾಷ್ಟ್ರ ನಾಯಕ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಇದೇ ವೇಳೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಕೇಪರಾಜು ಮತ್ತು ಸುಹೈಲ್ ಕಂದಕ್ ಮುಂಬರುವ ಯುವ ಕಾಂಗ್ರೆಸ್ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಇದೇ ವೇಳೆ ಲುಕ್ಮಾನ್ ಬಂಟ್ವಾಳ, ಸುನಿತ್ . ಕಿರಣ್ ಬುಡ್ಲೆಗುಟ್ಟು, ಪ್ರಸಾದ್ ಮಲ್ಲಿ, ಲಾರೆನ್ಸ್ ಡಿ’ಸೋಜಾ, ಮತ್ತು ಇತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಜರಿದ್ದರು.