ಉಡುಪಿ ಅ 23: ಸರಣಿ ಅಫಘಾತ ಹಾಗೂ ಸಾವು ನೋವುಗಳ ಬಳಿಕ ಹದೆಗೆಟ್ಟ ಮಣಿಪಾಲ ಪರ್ಕಳ ಹೆದ್ದಾರಿಯನ್ನು ಕೊನೆಗೂ ದುರಸ್ಥಿಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಮಣಿಪಾಲ ಸಿಂಡಿಕೇಟ್ ಸರ್ಕಲ್ನಿಂದ ಪರ್ಕಳ ತನಕ ಹೆದ್ದಾರಿ ಕಳೆದ 3 ವರ್ಷಗಳಿಂದ ಹದೆಗೆಟ್ಟಿತ್ತು. ಹದೆಗೆಟ್ಟಿರುವ ರಸ್ತೆಯ ದುರಸ್ಥಿಗೆ ಆಗ್ರಹಿಸಿ ಉಡುಪಿಯ ವಿವಿಧ ಸಂಘಟನೆ ಹಾಗೂ ನಾಗರೀಕರಿಂದ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗಿದ್ದವು. ಆದ್ರೆ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರ ಮಾತ್ರ ಯಾವ ಪ್ರತಿಭಟನೆಗಳಿಗೆ ಎಚ್ಚೆತ್ತುಕೊಂಡಿರಲ್ಲಿಲ್ಲ. ಇತ್ತೀಚಿಗೆ ಪರ್ಕಳದ ಬಳಿ ಬೈಕ್ ಸವಾರನೊಬ್ಬ ಗುಂಡಿ ತಪ್ಪಿಸುವ ಭರದಲ್ಲಿ 1 ವರ್ಷದ ಮಗು ರಸ್ತೆಗೆ ಬಿದ್ದು ಸಾವನ್ನಪ್ಪಿತ್ತು. ಈ ಘಟನೆಯ ನಂತರ ಹೆದ್ದಾರಿ ಅವವ್ಯಸ್ಥೆಯ ವಿರುದ್ದ ವ್ಯಾಪಕ ಜನಕ್ರೋಶ ಭುಗಿಲೆದ್ದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ನಿನ್ನೆಯಿಂದ ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಹೆದ್ದಾರಿ ದುರಸ್ಥಿಯ ಕೆಲಸ ಕಾರ್ಯನಡೆಯುತ್ತಿದೆ. ಮಲ್ಪೆ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ೫೦ ಕಿಲೋ ಮೀಟರ್ ವ್ಯಾಪ್ತಿಯ ಮಣಿಪಾಲ ಸಿಂಡಿಕೇಟ್ನಿಂದ ಪರ್ಕಳದವೆರಗಿನ ಹೆದ್ದಾರಿಯ ದುರಸ್ಥಿಯನ್ನು ರಾಜ್ಯ ಸರಕಾರ ಪ್ರಕೃತಿ ವಿಕೋಪದ ಅನುದಾನದಡಿಯಲ್ಲಿ ಸುಮಾರು ೫೦ ಲಕ್ಷ್ಯ ವೆಚ್ಚದಲ್ಲಿ ಹೆದ್ದಾರಿಯ ದುರಸ್ಥಿಗೆ ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಕೊನೆಗೂ ಎಚ್ಚೆತ್ತು ಹೆದ್ದಾರಿಯ ದುರಸ್ಥಿಗೆ ಮುಂದಾಗಿರುವ ಜಿಲ್ಲಾಡಳಿತದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.