ಕಾಸರಗೋಡು,ಜ 15 (MSP): ಹಿಂದೂ ಮುಖಂಡರ ಹತ್ಯೆ ಸಂಚು ಆರೋಪದಲ್ಲಿ ದಿಲ್ಲಿಯ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕಾಸರಗೋಡಿನಲ್ಲಿ ಬಂಧಿಸಿ ಚೆಂಬರಿಕದ ತಸ್ಲಿಂ ಅಲಿಯಾಸ್ ಮುಹತಸಿಂ ತಸ್ಲಿಂ (38) ಎಂಬಾತನನ್ನು ಬಂಧಿಸಿ ದಿಲ್ಲಿಗೆ ಕರೆದೊಯ್ದಿದ್ದು, ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತ ತಸ್ಲೀಂ ಸಹಚರರ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಇದಲ್ಲದೆ ಜಿಲ್ಲೆಯ ಹಲವರೊಂದಿಗೆ ನಿಕಟ ನಂಟು ಹೊಂದಿರುವ ಬಗ್ಗೆ ಮಾಹಿತಿ ಇದ್ದು ಅವರ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.
ಕಾಸರಗೋಡು ಜಿಲ್ಲಾ ಎಸ್ಪಿ ಸಹಾಯದೊಂದಿಗೆ ದಿಲ್ಲಿ ಪೊಲೀಸರ ವಿಶೇಷ ತಂಡ ಆರೋಪಿ ತಸ್ಲಿಂನನ್ನು ಚಟ್ಟಂಚಾಲ್ ನಲ್ಲಿರುವ ಆತನ ಪತ್ನಿಯ ಸೋದರನ ಮನೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಆರ್ಎಸ್ಎಸ್ ನೇತಾರ ಡಾ| ಕಲ್ಲಡ್ಕ ಪ್ರಭಾಕರ ಭಟ್, ಹಿಂದೂ ಸಂಘಟನೆಗಳ ನೇತಾರರಾದ ಶರಣ್ ಪಂಪ್ವೆಲ್, ಜಗದೀಶ್ ಶೇಣವ ಮೊದಲಾದವರ ಹತ್ಯೆಗೂ ಸಂಚು ರೂಪಿಸಿರುವ ಬಗ್ಗೆ ಹಾಗೂ ಭಯೋತ್ಪಾದಕ ಸಂಘಟನೆಯ ನಂಟು ಹೊಂದಿದ್ದಾನೆಂಬ ಮಾಹಿತಿ ಆಧಾರದಲ್ಲಿ ದಿಲ್ಲಿ ಪೊಲೀಸರ ವಿಶೇಷ ತನಿಖಾ ತಂಡ ಕೇರಳ ಪೊಲೀಸರ ಸಹಾಯದಿಂದ ಬಂಧಿಸಿದೆ.
ಕೊಲ್ಲಿಯಲ್ಲಿ ಮದ್ಯ ವ್ಯಾಪಾರ ತಸ್ಲಿಂನ ಪ್ರಧಾನ ಕಸುಬಾಗಿತ್ತು. ಅಲ್ಲಿ ಉಂಟಾದ ಸಮಸ್ಯೆಯೊಂದಕ್ಕೆ ಸಂಬಂಧಿಸಿ ಆತನನ್ನು ಊರಿ ನಲ್ಲಿ ಕೊಲೆಗೈಯ್ಯಲು ತಂಡವೊಂದು ಯತ್ನಿಸಿತ್ತು ಎಂದೂ ತಿಳಿದುಬಂದಿದೆ