ತಿರುವನಂತಪುರ, ಜ 15 (MSP): ಅಯ್ಯಪ್ಪ ಭಕ್ತರ ವಿರೋಧದ ನಡುವೆಯೂ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಪ್ರವೇಶ ಮಾಡಿದ್ದ ಕನಕದುರ್ಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ ಕಾರಣ ಸಂಬಂಧಿಕರೇ ಅವರ ಮೇಲೆ ಮಾಡಿದ ಹಲ್ಲೆ ಎಂದು ತಿಳಿದುಬಂದಿದೆ.
ಅವರ ಮೇಲಿನ ಹಲ್ಲೆಯನ್ನು ರಾಷ್ಟೀಯ ಮಾಧ್ಯಮಗಳು ವರದಿ ಮಾಡಿದೆ. ಕನಕದುರ್ಗ ಹಾಗೂ ಬಿಂದು ಎಂಬ ಮಹಿಳೆಯರಿಬ್ಬರು ಶಬರಿಮಲೆ ಅಯ್ಯಪ್ಪನನ್ನು ಸನ್ನಿಧಿ ಪ್ರವೇಶ ವಿಚಾರ ಹೊರಬರುತ್ತಿದ್ದಂತೆ ಶಬರಿಮಲೆ ಕೇರಳ ಉದ್ವಿಗ್ನಗೊಂಡಿತ್ತು. ಆ ಬಳಿಕ ಇಬ್ಬರು ಮಹಿಳೆಯರೂ ತಮ್ಮ ಮನೆಗೆ ತೆರಳದೆ ನಾಪತ್ತೆಯಾಗಿದ್ದರು. ಭದ್ರತೆಯ ಕಾರಣಕ್ಕೆ ಹಾಗೂ ಅವರಿಗೆ ಜೀವಬೆದರಿಗೆ ಇದ್ದ ಹಿನ್ನಲೆಯಲ್ಲಿ ಕೆಲ ಕಾಲ ಅಜ್ಞಾತ ಸ್ಥಳದಲ್ಲಿದ್ದ ಅವರು ಸೋಮವಾರವಷ್ಟೇ ಮನೆಗೆ ವಾಪಸು ಬಂದಿದ್ದರು. ಈ ವೇಳೆ ಸಂಬಂಧಿಕರೇ ಆಕೆಗೆ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಪರಿಣಾಮ ಕನಕದುರ್ಗಾ ತೀವ್ರ ಅಸ್ವಸ್ಥರಾಗಿದ್ದಾರೆ ಮಲಪುರಂ ಜಲ್ಲೆಯ ಪೆರಿಂಥಲಮನ್ನಾ ಪಟ್ಟಣದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇನ್ನೊಂದು ಮೂಲದ ಪ್ರಕಾರ ’ಕನಕದುರ್ಗ ಮೇಲೆ ಆಕೆಯ ಅತ್ತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಜ.2ರಂದು ಶಬರಿಮಲೆಗೆ ಪ್ರವೇಶಿಸಿ ಕನಕದುರ್ಗ ದೇಶಾದ್ಯಂತ ಸುದ್ದಿಯಾಗಿದ್ದರು. ನನ್ನ ಹೆಂಡತಿ ನಾಪತ್ತೆಯಾಗಿದ್ದಾಳೆ ಅವರ ಪತಿ ಪೊಲೀಸರಿಗೆ ದೂರು ನೀಡಿದ್ದರು. ಹಲವು ಬೆಳವಣಿಗೆಯ ಹಿನ್ನಲೆಯಲ್ಲಿ ಕನಕದುರ್ಗಾ ಅವರ ಕುಟುಂಬ ‘ನಿನಗೂ ನಮಗೂ ಸಂಬಂಧವಿಲ್ಲ’ ಎಂದು ಆಕೆಯೊಂದಿಗಿನ ಸಂಬಂಧವನ್ನೇ ನಿರಾಕರಿಸಿತ್ತು.