ಕಾಸರಗೋಡು, ಜ 15(SM): ನಗರದ ಟೈಲರ್ ಓರ್ವರ ಮೃತದೇಹ ಬಾವಿಕ್ಕರೆ ಸಮೀಪದ ತೂಗು ಸೇತುವೆ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ. ಕಾಸರಗೋಡು ನಗರದಲ್ಲಿ ಟೈಲರ್ ವೃತ್ತಿ ನಡೆಸುತ್ತಿರುವ ಕಾನತ್ತೂರಿನ ಸಿ. ಮೋಹನ್(51) ಮೃತಪಟ್ಟವರು.
ಮೋಹನ್ ಸಾವಿನ ಬಗ್ಗೆ ಸಂಶಯ ಉಂಟಾಗಿದ್ದು, ಈ ಹಿನ್ನಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸೋಮವಾರ ರಾತ್ರಿ ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದ ಮೋಹನ್ ನಾಪತ್ತೆಯಾಗಿದ್ದರು. ಪತ್ನಿ ಮೊಬೈಲ್ ಗೆ ಕರೆ ಮಾಡಿದರೂ ಪ್ರತಿಕ್ರಿಯೆ ಲಭಿಸುತ್ತಿರಲಿಲ್ಲ.
ಈ ನಡುವೆ ಮಂಗಳವಾರ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ತೂಗು ಸೇತುವೆ ಬಳಿ ಚಪ್ಪಲಿ, ಪ್ಲಾಸ್ಟಿಕ್ ಕವರ್, ಕೀಲಿ ಕೈ, ಮೊಬೈಲ್ ಪತ್ತೆಯಾಗಿದೆ.
ಆದೂರು ಪೊಲೀಸರು ಸ್ಥಳಕ್ಕೆ ಆದೂರು ಪೊಲೀಸರು ಮಹಜರು ನಡೆಸಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.