ಸುಬ್ರಹ್ಮಣ್ಯ ಅ 24: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿದೆ.ಈ ಪ್ರಕರಣ ಅ. 24ರ ಮಂಗಳವಾರ ಮುಂಜಾನೆ ಬೆಳಕಿಗೆ ಬಂದಿದ್ದು ದೇವಳದ ಮೂರು ಕಾಣಿಕೆ ಹುಂಡಿಯಲ್ಲಿದ್ದ ಹಣ ಮತ್ತು ಕಪಾಟಿನ ಬಾಗಿಲು ಒಡೆದು ಹಣ ಕಳ್ಳತನ ಮಾಡಲಾಗಿದೆ. ಕಾಣಿಕೆ ಹುಂಡಿ ಸೇರಿ ಕಪಾಟಿನಲ್ಲಿದ್ದ ಅಂದಾಜು ೨೦ಸಾವಿರದಷ್ಟು ಹಣವನ್ನು ಕಳ್ಳರು ದೋಚಿದ್ದಾರೆ ಎಂದು ಅಂದಾಜಿಸಲಾಗಿದೆ.ಸೋಮವಾರ ತಡರಾತ್ರಿ ದೇವಳದ ಬಲಭಾಗದಲ್ಲಿರುವ ಬಾಗಿಲಿನ ಮೇಲಿನ ಛಾವಣಿ ಮೇಲೆ ಏರಿ ಒಳಹೋಗಿ ಕಳ್ಳರು ಈ ಕೃತ್ಯವನ್ನು ಎಸಗಿದ್ದಾರೆ. ದೇವಳದಲ್ಲಿದ್ದ ಮೂರು ಕಾಣಿಕೆ ಹುಂಡಿಯಲ್ಲಿ ಎರಡು ಕಾಣಿಕೆ ಹುಂಡಿಯನ್ನು ದೇವಳದ ಹೊರ ವಲಯಕ್ಕೆ ತಂದು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾಧಿಕಾರಿ ಗೋಪಾಲ್ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.