ಮಂಗಳೂರು, ಅ 24: ರಾಜ್ಯ ರಾಜಕಾರಣದಲ್ಲಿ ಇದೀಗ ಆಹಾರ ಸೇವನೆಯೇ ಮುಖ್ಯ ಚರ್ಚೆಯ ವಿಷಯವಾದಂತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮಾಂಸಹಾರ ಸೇವಿಸಿ ಧರ್ಮಸ್ಥಳ ದೇವಾಲಯ ಪ್ರವೇಶ ಮಾಡಿದ್ದು ರಾಜ್ಯವ್ಯಾಪ್ತಿ ಚರ್ಚೆಯಾಗಿ ದೇಗುಲದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ ವಿ ಶೆಟ್ಟಿ ಮಾಂಸ ಸೇವನೆ ಮಾಡಿ ದೇವಸ್ಥಾನ ಪ್ರವೇಶ ಮಾಡಬಾರದು ಎನ್ನುವ ನಿಯಮವನ್ನು ನಾವು ರೂಪಿಸಿಲ್ಲ ಎನ್ನುವ ಮೂಲಕ ವಿವಾದಗಳಿಗೆ ತೆರೆ ಎಳೆದ್ದರು. ಆದರೆ ಅತ್ತ ಬಿಜೆಪಿ ಮುಖಂಡ ಸೊಗಡು ಶಿವಣ್ಣ ತುಮಕೂರಿನಲ್ಲಿ ಮುಖ್ಯಮಂತ್ರಿಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ. 'ಮುಖ್ಯಮಂತ್ರಿಗಳು ತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಪ್ರವೇಶ ಮಾಡಲಿ' ಎಂದು ಶಿವಣ್ಣ ಸವಾಲ್ ಎಸೆದಿದ್ದಾರೆ. ಒಟ್ಟಿನಲ್ಲಿ ಸದ್ಯ ಈ ಆಹಾರ ಸೇವನೆ ಚರ್ಚೆ ವಿವಾದ ಅಂತ್ಯಗೊಳ್ಳುವಂತೆ ಕಾಣುತ್ತಿಲ್ಲ್ಲ.