ಬೆಂಗಳೂರು,ಜ 17(MSP): ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕೇಬಲ್ ಟಿವಿಗೆ ಹೊಸ ದರ ಜಾರಿಗೊಳಿಸುತ್ತಿರುವುದನ್ನು ಮತ್ತು ಗ್ರಾಹಕರೇ ಟಿ.ವಿ ಚಾನೆಲ್ ಗಳನ್ನು ಆಯ್ಕೆ ಮಾಡುವುದನ್ನು ವಿರೋಧಿಸಿ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ಜ. 24 ರಂದು ದಕ್ಷಣ ಭಾರತ ಕೇಬಲ್ ಸಂಪರ್ಕ ಸ್ಥಗಿತಕ್ಕೆ ಕರೆ ನೀಡಿದೆ.
ಜನವರಿ 24 ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕ ಕೇಬಲ್ ಸಂಪರ್ಕ ಸ್ಥಗಿತಗೊಳಿಸುವ ಮೂಲಕ ಟ್ರಾಯ್ ಗೆ ಬಿಸಿ ಮುಟ್ಟಿಸಲಾಗುವುದೆಂದು ಸಂಘದ ಅಧ್ಯಕ್ಷ ಪ್ಯಾಟ್ರಿಕ್ಸ್ ರಾಜು ತಿಳಿಸಿದ್ದಾರೆ. ದಕ್ಷಿಣ ಭಾರತಾದ್ಯಂತ ಕೇಬಲ್ ಟಿ.ವಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಆ ದಿನ ಕರ್ನಾಟಕದಲ್ಲೂ ಅಂದು ಕೇಬಲ್ ಟಿವಿಗಳು ಬಂದ್ ಆಗಲಿವೆ ಎಂದು ಅವರು ತಿಳಿಸಿದ್ದಾರೆ.
ಹೊಸ ಆಫರ್ ನೆಪವೊಡ್ಡಿ ಕಾರ್ಪೊರೇಟರ್ ಸಂಸ್ಥೆಗಳಿಗೆ ಟ್ರಾಯ್ ಅನುಕೂಲ ಮಾಡಿಕೊಡಲು ಮುಂದಾಗಿದೆ. ನಾವು ಬೆಳೆಸಿದ ಉದ್ಯಮ ಬೇರೆಯವರಿಗೆ ನೀಡಿ ಕೆಲಸಗಾರರಾಗಿ ಮುಂದುವರೆಯಲು ನಮಗಿಷ್ಟವಿಲ್ಲ. ಈ ಉದ್ಯಮವನ್ನೇ ನಂಬಿರುವ ಕೋಟ್ಯಾಂತರ ಕುಟುಂಬಗಳು ಬೀದಿಗೆ ಬೀಳಲಿದೆ ಹಾಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿದ್ದಾರೆ. ಕೇಂದ್ರ ಸರಕಾರ ಜಿ ಎಸ್ ಟಿ ನೆಪದಲ್ಲಿ ಶೇ 18 ತೆರಿಗೆ ವಿಧಿಸುತ್ತಿದೆ. ಹಳ್ಳಿಯ ಕೂಲಿ ಕಾರ್ಮಿಕರು ಮನರಂಜನೆಗಾಗಿ ಟಿವಿ ನೋಡುತ್ತಾರೆ. ಅವನ ಬಳಿ ನಾವು ಶೇ. 18ರಷ್ಟು ತೆರಿಗೆ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ನಿಯಮದಿಂದ ನಮ್ಮ ಆದಾಯಕ್ಕೂ ಕುತ್ತು ಬರುತ್ತದೆ. ಆದಾಯವೇ ಸಿಗದಿದ್ದಾಗ ಸೇವೆ ನೀಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.