ಮಂಗಳೂರು ಜ 17(SM): ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ ಇದರ ವತಿಯಿಂದ ನಾಲ್ಕನೇ ವರ್ಷದ ಗಾಣಿಗ ಸಂಗಮ ಗಾಣಿಗ ಪರಿವಾರ್ ವೇದಿಕೆಯಲ್ಲಿ ನೃತ್ಯ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜನವರಿ ೨೦ರಂದು ಮಂಗಳೂರಿನ ಪುರಭವನದಲ್ಲಿ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಂಡದ ಸದಸ್ಯರಾದ ಪ್ರಮೋದ್ ಕರ್ಕೇರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಅಂದು ಬೆಳಿಗ್ಗೆ 9 ಗಂಟೆಗೆ ಗಾಣಿಗ ಸಂಗಮಕ್ಕೆ ಮಂಜೇಶ್ವರ ಕೀರ್ತೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಿ ಎಮ್ ಕಮಲಾಕ್ಷ ಚಾಲನೆ ನೀಡುವರು. ಉದ್ಘಾಟನೆಯನ್ನು ಉದ್ಯಮಿ ಸದಾನಂದ ಶೆಟ್ಟಿ ನೆರವೇರಿಸುವರು. ಅಧ್ಯಕ್ಷತೆಯನ್ನು ಹರೀಶ್ ಕುತ್ತಾರ್ ವಹಿಸಲಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮುಖ್ಯ ಅತಿಥಿಯಾಗಿರುವರು ಎಂದರು.
ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಘವೇಂದ್ರ ಕೆ ವಿ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ಕುಮಾರ್ ಕಟೀಲು, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಸಂಜೀವ ಮಠಂದೂರು, ರಾಜೇಶ್ ನಾಯ್ಕ್, ಮುಂಬೈ ಗಾಣಿಗ ಸಂಘದ ಅಧ್ಯಕ್ಷ ಶ್ರೀನಿವಾಸ್ ಪಿ ಸಪಲ್ಯ, ಆದರ್ಶ ಜಿ. ಕೆ. ವಿಶ್ವನಾಥ್ ಎಸ್, ರಣದೀಪ್ ಕಾಂಚನ್, ಪ್ರಶಾಂತ್ ಜಿ ಪೈ, ಪೂಂಜಾಲಕಟ್ಟೆ ಪೊಲೀಸ್ ಠಾಣಾ ಉಪನಿರೀಕ್ಷಕಿ ಸೌಮ್ಯ ಜೆ, ಇಂದಿರಾ ಪ್ರಿಯದರ್ಶಿನಿ, ಜನಾರ್ದನ ಅರ್ಕುಳ ಉಪಸ್ಥಿತರಿರುವರು.
ವಿಶೇಷ ಆಹ್ವಾನಿತರಾಗಿ ಭಾರತೀಯ ಭೂಸೇನೆಯ ನಿವೃತ್ತ ಸುಬೇದಾರ್ ಮೇಜರ್ ದಾಮೋದರ ಎಸ್, ಕರಾಟೆಪಟು ರಂಜಿತ್ ಎಸ್ ಮುಂಡ್ಕೂರು, ಡ್ಯಾನ್ಸ್ ಕೊರಿಯೋಗ್ರಫರ್ ಗೌತಮ್ ಗಾಣಿಗ, ಕಾಮಿಡಿ ಕಿಲಾಡಿಗಳು ರನ್ನರ್ ಅಪ್ 2018ರ ಸೂರಜ್ ಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ. ಇದೇ ವೇಳೆ ಸಾಧಕರಿಗೆ ಸನ್ಮಾನ, ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದರು. ನೃತ್ಯಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷ ರಾಘವೇಂದ್ರ ಕೆ ವಿ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಸಂಧ್ಯಾ ವೆಂಕಟೇಶ್, ಸದಸ್ಯರಾದ ಪುಷ್ಪರಾಜ್ ಪುತ್ರನ್, ಅಶೋಕ್ ಕುರ್ನಾಡ್, ವಿನೋದ್ ಅರ್ಕುಳ ಮೊದಲಾದವರಿದ್ದರು.