ಉಡುಪಿ ಅ 24: ಪೊಲೀಸರು ದರ್ಪ ಅಹಂಕಾರವನ್ನು ಬಿಟ್ಟು ಪೋಲಿಸ್ ಇಲಾಖೆಗೆ ಬರುವ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕು. ಸಂವಿಧಾನ ನೀಡಿರುವ ಲಾಠಿ, ಬಂದೂಕು ಸಮಾಜಘಾತುಕರಿಕೆ ಮಾತ್ರ ಹೊರತು ಜನಸಾಮಾನ್ಯ, ರೈತರ ಮೇಲೆ ಪ್ರಯೋಗ ಮಾಡಲು ಅಲ್ಲ. ಜನರೊಂದಿಗೆ ತಾಳ್ಮೆಯಿಂದ ವ್ಯವಹರಿಸಲು ಪೊಲೀಸರಿಗೆ ತರಬೇತಿ ನೀಡಲಾಗುತ್ತದೆ ವಿನಾಃ ಬೈದು ಮಾತನಾಡಲು ಅಲ್ಲ. ಜನಸ್ನೇಹಿ ಪೊಲೀಸರಾದಾಗ ಮಾತ್ರ ಪೋಲಿಸ್ ಹಾಗೂ ಜನರ ನಡುವಿನ ಅಂತರ ಕಡಿಮೆಯಾಗುತ್ತಿದೆ. ಪೊಲೀಸರು ಜನರೊಂದಿಗೆ ಬೆರೆತಾಗ ಮಾತ್ರ ನಿಜವಾದ ಅರಕ್ಷಕರು ಎಂದೆನಿಸಿಕೊಳ್ಳುತ್ತಾರೆ. ಜನರಿಗೂ ಕೂಡಾ ಪೊಲೀಸರಲ್ಲಿ ವಿಶ್ವಾಸ ಮೂಡುತ್ತದೆ ಎಂದು ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
ಉಡುಪಿಯ ತಾತ್ಕಲಿಕ ತರಬೇತಿ ಶಾಲೆಯಲ್ಲಿ ತರಬೆತಿ ಪಡೆದ 11 ನೇ ತಂಡದ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿಗರ್ಮನ ಪಥ ಸಂಚಲನದಲ್ಲಿ ಅವರು ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.
ಪೊಲೀಸ್ ತರಬೇತಿ ಪಡೆದ ಅರಕ್ಷಕರಿಗೆ ಈ ಸಂದರ್ಭ ಉಡುಪಿ ಜಿಲ್ಲಾ ಹೆಚ್ಚುವರಿ ಪೋಲಿಸ್ ನಿದೇರ್ಶಕ- ಕುಮಾರ ಚಂದ್ರ ಅವರು ಪ್ರತಿಜ್ಙಾವಿಧಿ ಭೋದನೆಯನ್ನು ಮಾಡಿದರು . ತರಬೇತಿ ಸಮಯದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ನಾಗರೀಕ ಪೊಲೀಸರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ವಿತ್ತರಿಸಲಾಯಿತು.ಧಾರವಾಡದ ಸಂತೋಷ್ ಕುಮಾರ್ ಪೂಜಾರ್ ಅವರು ಐ ಜಿ ಪಿಯಿಂದ ಅತ್ಯುತ್ತಮ ಪರೀಕ್ಷಣಾಧಿಕಾರಿ ಎಂಬ ಪ್ರಶಸ್ತಿಯನ್ನು ಪಡೆದುಕೊಂಡ್ರು. ತರಬೇತಿ ಶಾಲೆಯಲ್ಲಿ 8 ಮಂದಿ ಮಾಜಿ ಸೈನಿಕರು ಬೆಳಗಾಂನಿಂದ 44 ಜನ , ಹುಬ್ಬಳಿ ದಾರವಾಡದಿಂದ 41 ಮಂದಿ,ಬೆಂಗಳೂರಿನಿಂದ 6 ಮಂದಿ ಸೇರಿದಂತೆ ಒಟ್ಟು ೯೫ ಮಂದಿ ಪೊಲೀಸರು ತರಬೇತಿ ಪಡೆದು ನಿರ್ಗಮಿಸಿದ್ರು. ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ್, ಉಡುಪಿ ಡಿ ವೈ ಎಸ್ಪಿ- ಕುಮಾರಸ್ವಾಮಿ, ಕಾರ್ಕಳ ಎಎಸ್ಪಿ-ರಿಷೀಕೇಶ್ ಸೋನವನೆ, ಕುಂದಾಪುರ ಡಿ ವೈ ಎಸ್ಪಿ-ಪ್ರವೀಣ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.