ಮಂಗಳೂರು, ಜ19(SS): ನಗರದ ಪಂಪ್ವೆಲ್ ಹಾಗೂ ತೊಕ್ಕೊಟ್ಟು ಫ್ಲೈ ಓವರ್ ವಿಚಾರದಲ್ಲಿ ಟ್ವಿಟ್ಟರ್ ಸಮರ ಆರಂಭವಾಗಿದೆ. ಪಂಪ್ವೆಲ್ ಫ್ಲೈ ಓವರ್ ಕಾಮಾಗಾರಿ ಕಳೆದ 9 ವರ್ಷಗಳ ಹಿಂದೆ ಆರಂಭವಾಗಿದ್ದರೂ ಈವರೆಗೆ ಫೂರ್ಣಗೊಂಡಿಲ್ಲ. ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ಟರ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಮಾಜಿ ಸಚಿವ ರಮಾನಾಥ್ ರೈ ಅವರೇ, ತಾನು ಜಿಲ್ಲೆಗಾಗಿ 1500 ಕೋಟಿ ತಂದಿದ್ದೇನೆ. ಆಡುವುದು ಮೋಸದ ಪಗಡೆಯಾಟವಲ್ಲ, ಮಾಡುವುದಾದರೆ ಧರ್ಮಯುದ್ಧವನ್ನೇ ಮಾಡೋಣ. ಎಂದು ಮಾಜಿ ಸಚಿವ ರಮಾನಾಥ ರೈ ಅವರಿಗೆ ಸವಾಲು ಹಾಕಿದ್ದಾರೆ.
ಕಾಮಾಗಾರಿ ವಿಳಂಬಕ್ಕೆ ಕಾರಣ ಯಾರು ಅನ್ನೋದನ್ನು ಸರಿಯಾಗಿ ಚರ್ಚೆ ಮಾಡದೆ ರಾಜಕೀಯ ಮಾಡುತ್ತಿದ್ದೀರಿ. ಈ ರೀತಿ ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ಟ್ವೀಟ್ಟರ್ ಮೂಲಕ ಹೇಳಿದ್ದಾರೆ.