ಬೆಂಗಳೂರು ಅ 24: ಸೈನೈಡ್ ಮೋಹನ್ ಗೆ ಕೆಳ ಹಂತದ ನ್ಯಾಯಲಯ ವಿಧಿಸಿದ್ದ ಮತ್ತೊಂದು ಗಲ್ಲು ಶಿಕ್ಷೆಯನ್ನು ರಾಜ್ಯ ಹೈಕೋರ್ಟ್ ರದ್ದು ಪಡಿಸಿದೆ. ವೇಣೂರಿನ ಸ್ವಸಹಾಯ ಗುಂಪಿನ ಸದಸ್ಯೆ ಹಾಗೂ ಬಹುಜನ ಸಮಾಜ ಪಾರ್ಟಿಯ ಪದಾಧಿಕಾರಿಯಾಗಿದ್ದ ಲೀಲಾ ಅಲಿಯಾಸ್ ಲೀಲಾವಲಿ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಭಂದಿಸಿದಂತೆ ಕೆಳ ಹಂತದ ವಿಚಾರಣಾ ನ್ಯಾಯಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ. ಈ ಶಿಕ್ಷೆಯನ್ನು ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳೀಮಠ್ ಹಾಗೂ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಾದ- ಪ್ರತಿವಾದಗಳನ್ನು ಅಲಿಸಿದ ನ್ಯಾಯಲಯ ಕೊಲೆ ಆರೋಪಕ್ಕೆ ಸಮರ್ಪಕ ಪುರಾವೆಗಳಿಲ್ಲದ ಕಾರಣ ನ್ಯಾಯ ಪೀಠ ಸೈನೆಡ್ ಮೋಹನ್ ಗೆ 5 ವರ್ಷಗಳ ಸಜೆ ವಿಧಿಸಿದೆ. ಹೀಗಾಗಿ ಮೂರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಸೈನೆಡ್ ಮೋಹನ್ ಗೆ ಎರಡು ಪ್ರಕರಣದಲ್ಲಿ ಗಲ್ಲು ಶಿಕ್ಷೆಯಿಂದ ಪಾರಾಗಿದ್ದು ಇನ್ನೊಂದು ಪ್ರಕರಣದ ವಿಚಾರಣೆ ಬಾಕಿಯಿದೆ.
ಇನ್ನು ಬಂಟ್ವಾಳದ ಅನಿತಾ ಎಂಬಾಕೆಗೆ ಸೈನೈಡ್ ನೀಡಿ ಕೊಲೆಗೈದು ದರೋಡೆ ಮಾಡಿದ ಪ್ರಕರಣದಲ್ಲಿ ಸರಣಿ ಹಂತಕ ಮೋಹನ್ ಕುಮಾರ್ ಅಲಿಯಾಸ್ ಸೈನೆಡ್ ಮೋಹನ್ನನ್ನು ಅಪರಾಧಿ ಎಂದು ಘೋಷಿಸಿರುವ ಹೈಕೋರ್ಟ್, ಅಧೀನ ನ್ಯಾಯಾಲಯ ಆತನಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಮಾರ್ಪಾಡುಗೊಳಿಸಿ ಅಕ್ಟೋಬರ್ ೧೩ ರಂದು ಜೀವಿತಾವಧಿವರೆಗೂ ಜೈಲು ಶಿಕ್ಷೆ ವಿಧಿಸಿ ತೀರ್ಪುನೀಡಿತ್ತು.