ಮಂಗಳೂರು, ಜ19(SS): ಹಲವು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಕಾಮಗಾರಿ ಬಗ್ಗೆ ಅಣಕಿಸಿರುವ ವೀಡಿಯೋ, ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ಈ ಫ್ಲೈ ಓವರ್ ಕಾಮಗಾರಿ ಆರಂಭವಾಗಿ ಬರೋಬ್ಬರಿ 9 ವರ್ಷಗಳು ಸಂದಿವೆ. ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಐವನ್ ಡಿ’ಸೋಜಾ ಅವರೇ, ಕಳೆದ 10 ವರ್ಷಗಳಲ್ಲಿ ನಾನು ದಕ್ಷಿಣ ಕನ್ನಡಕ್ಕೆ ತಂದ 15,000 ಕೋಟಿ ಅನುದಾನದ ಬಗ್ಗೆ ಚರ್ಚೆ ಮಾಡೋಣ. ನಾನು ಬಕೆಟ್ ಹಿಡಿದು ಹಿಂಬಾಗಿಲ ಮೂಲಕ ಅಧಿಕಾರ ಹಿಡಿದವನಲ್ಲ, ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ನನ್ನನ್ನು ಎದುರಿಸಿ. ಅದನ್ನು ಬಿಟ್ಟು ನೀಚ ರಾಜಕಾರಣಕ್ಕೆ ಇಳಿದು ಬಾಯಿಗೆ ಬಂದ ಹಾಗೆ ಮಾತನಾಡಿದರೆ ಸಿಕ್ಕ ಅಧಿಕಾರವನ್ನೂ ಕಳೆದುಕೊಳ್ಳಬೇಕಾದೀತು ಎಚ್ಚರಿಕೆ ಎಂದು ಕಟೀಲು ಹೇಳಿದ್ದಾರೆ.