ಮಂಗಳೂರು, ಜ19(SS): ಕಾಂಗ್ರೆಸ್ ಶಾಸಕರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಬಿಜೆಪಿ ಗೇಮ್ ಪ್ಲಾನ್ಗೆ ಕಾಂಗ್ರೆಸ್ ಲಾಜಿಕ್ ತೋರಿಸ್ತಾ ಇದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಸಮಸ್ಯೆ ಏನೂ ಇಲ್ಲ. ನಮ್ಮ ಪಕ್ಷದ ಶಾಸಕರೆಲ್ಲಾ ಒಗ್ಗಟ್ಟಾಗಿ ಇದ್ದಾರೆ. ಆದರೆ ಬಿಜೆಪಿ ಶಾಸಕರು ಕ್ಷೇತ್ರ ಬಿಟ್ಟು ದೆಹಲಿಯಲ್ಲಿದ್ಧಾರೆ. ಹೀಗಾಗಿ ಒಂದು ತಾರ್ಕಿಕ ಅಂತ್ಯಕ್ಕಾಗಿ ಕಾಂಗ್ರೆಸ್ ಕೂಡಾ ಲಾಜಿಕ್ ನಡೆಸ್ತಾ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರಿಗೆ ನಷ್ಟವಾಗುತ್ತದೆ. ಬಂಗಾರಪ್ಪ ಬಿಜೆಪಿಗೆ ಹೋಗಿ ಪರಿಸ್ಥಿತಿ ಏನಾಯಿತು ಎನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಹೀಗಾಗಿ ಮುಂಬೈನಲ್ಲಿ ಇರುವ ಕಾಂಗ್ರೆಸ್ ಶಾಸಕರು ಪಕ್ಷ ಬಿಡೋದಿಲ್ಲ ಎನ್ನುವ ವಿಶ್ವಾಸವನ್ನು ಖಾದರ್ ವ್ಯಕ್ತಪಡಿಸಿದ್ದಾರೆ.