ಶಬರಿಮಲೆ, ಜ19(SS): ಶಬರಿಮಲೆ ಬೆಟ್ಟ ಹತ್ತಿ ಅಯ್ಯಪ್ಪ ಸ್ವಾಮಿಯ ದೇಗುಲ ಪ್ರವೇಶಿಸಲು ಯತ್ನಿಸಿದ್ದ 50 ವರ್ಷಕ್ಕಿಂತ ಕೆಳಗಿನ ಇಬ್ಬರು ಮಹಿಳೆಯರನ್ನು ಪೊಲೀಸರು ವಾಪಸ್ ಕಳುಹಿಸಿದ ಘಟನೆ ನಡೆದಿದೆ.
ಕಳೆದ 16ರಂದು ಬೆಟ್ಟ ಹತ್ತಿ ಅಯ್ಯಪ್ಪನ ದರುಶನ ಮಾಡಲು ರೇಶ್ಮ ನಿಶಾಂತ್ ಮತ್ತು ಶಲೀನಾ ಸಾಜೇಶ್ ಎಂಬ ಇಬ್ಬರು ಮಹಿಳೆಯರು ಯತ್ನಿಸಿದ್ದರು. ಆದರೆ ಪ್ರತಿಭಟನೆಯಿಂದಾಗಿ ವಾಹಸ್ ಬರಬೇಕಾಯಿತು. ಸುಮಾರು 30 ವರ್ಷ ಆಸುಪಾಸಿನಲ್ಲಿರುವ ಇವರಿಬ್ಬರೂ 41 ದಿನಗಳ ವೃತವನ್ನು ಕೈಗೊಂಡು ಬಂದಿರುವುದಾಗಿ ಹೇಳಿದ್ದರು. ಇದೀಗ ಮತ್ತೆ ಬೆಟ್ಟ ಹತ್ತಬೇಕೆಂದು ಬೆಳಗ್ಗೆ 5 ಗಂಟೆ ಸುಮಾರಿಗೆ ನಿಲಕ್ಕಲ್ ಮೂಲ ಶಿಬಿರದ ಬಳಿ ಬಂದಿದ್ದರು.
ಬಲಪಂಥೀಯ ಸಂಘಟನೆಗಳಿಂದ ಹೊರಗೆ ಪ್ರತಿಭಟನೆ ನಡೆಯುತ್ತಿರುವುದರಿಂದ ರಕ್ಷಣೆ ನೀಡುವುದು ಕಷ್ಟ ಎಂದು ಪೊಲೀಸರು ಹೇಳಿದ್ದರಿಂದ ಮಹಿಳೆಯರು ಹಿಂತಿರುಗಿ ಬರಬೇಕಾಯಿತು.