ನವದೆಹಲಿ, ಜ 20(MSP): ಮೋದಿ ಸರ್ಕಾರದ ನಾಲ್ಕೂವರೆ ವರ್ಷಗಳ ಆಡಳಿತಾವಧಿಯಲ್ಲಿ ಒಟ್ಟಾರೆ ಕೇಂದ್ರ ಸರ್ಕಾರಿ ಸಾಲದ ಪ್ರಮಾಣ ಶೇ.49ರಷ್ಟು ಏರಿಕೆಯಾಗಿ, 82 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಶುಕ್ರವಾರ ಸರ್ಕಾರವೇ ಬಿಡುಗಡೆಯಾದ ಮಾಡಿರುವ ಅಂಕಿ-ಅಂಶಗಳು ಮಾಹಿತಿ ನೀಡಿವೆ.
2014ರ ಜೂನ್ನಲ್ಲಿ ಕೇಂದ್ರ ಸರ್ಕಾರದ ಮೇಲೆ ಒಟ್ಟಾರೆ ಸಾಲದ ಪ್ರಮಾಣ 54,90,763 ಕೋಟಿ ರೂಪಾಯಿ ಆಗಿತ್ತು.. ಆದರೆ ಅದು 2018ರ ಸೆಪ್ಟೆಂಬರ್ನಲ್ಲಿ 82,03,253 ಕೋಟಿ ರು.ಗೆ ಏರಿಕೆ ಕಂಡಿದೆ ಎಂದು ಸರ್ಕಾರದ ಸಾಲಕ್ಕೆ ಸಂಬಂಧಿಸಿದ ಹಣಕಾಸು ಸಚಿವಾಲಯದ 8ನೇ ಆವೃತ್ತಿಯ ಸ್ಥಿತಿಗತಿ ವರದಿ ತಿಳಿಸಿದೆ.
ಈ ಅವಧಿಯಲ್ಲಿ ಸರ್ಕಾರದ ಸಾರ್ವಜನಿಕ ಸಾಲದ ಪ್ರಮಾಣ ಶೇ.51.7ರಷ್ಟುಹೆಚ್ಚಳಗೊಂಡು, 48 ಲಕ್ಷ ಕೋಟಿ ರು.ನಿಂದ 73 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಅಂತರಿಕ ಸಾಲದ ಪ್ರಮಾಣದ ಶೇ.54ರಷ್ಟು ಏರಿಕೆಯಾಗಿ 68 ಲಕ್ಷ ಕೋಟಿ.ರೂ ತಲುಪಿತ್ತು.
ಸರ್ಕಾರ ಹೊಂದಿರುವ ಒಟ್ಟಾರೆ ಸಾಲದ ವಿಸ್ತೃತ ವಿಶ್ಲೇಷಣೆಯನ್ನು ಒಳಗೊಂಡ ಸ್ಥಿತಿಗತಿ ವರದಿಯನ್ನು ಹಣಕಾಸು ಸಚಿವಾಲಯ ಹೊರತರುತ್ತದೆ. 2010-11ನೇ ಸಾಲಿನಿಂದ ಪ್ರತಿ ವರ್ಷ ಇದನ್ನು ಬಿಡುಗಡೆ ಮಾಡಲಾಗುತ್ತಿದೆ.