ಕಾಪು,ಜ 20(MSP):ಸಮಗ್ರ ಜೀರ್ಣೋದ್ಧಾರ ಗೊಳ್ಲುತ್ತಿರುವ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಚಲನಚಿತ್ರ ನಟ ಮತ್ತು ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರು ಪತ್ನಿ ಮಂಗಳಾ ಅವರ ಸಮೇತವಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಅವರು ೧೪ ವರ್ಷಗಳ ಬಳಿಕ ನನಗೆ ಅಮ್ಮನ ಮನೆ ಎಂಬ ಚಿತ್ರದಲ್ಲಿ ನಟಿಸುವ ಅವಕಾಶ ಲಭಿಸಿದೆ. ಈ ಸಂದರ್ಭದಲ್ಲೇ ಕಾಪು ಮಾರಿಯಮ್ಮನ ಸನ್ನಿದಿಗೆ ಬರಲೂ ಕೂಡಾ ಸಾಧ್ಯವಾಗಿದೆ. ಅನಾರೋಗ್ಯಕ್ಕೆ ಗುರಿಯಾಗಿ ನನ್ನ ಜೀವನವೇ ಮುಗಿಯಿತು ಎಂಬ ಹಂತದಲ್ಲಿರುವಾಗ ತಾಯಿಯೇ ನನ್ನನ್ನು ಆಶೀರ್ವದಿಸಿ ಮೇಲಕ್ಕೆತ್ತಿದ್ದಾರೆ. ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧ್ದಾರದ ನೀಲಿ ನಕ್ಷೆಯನ್ನು ವೀಕ್ಷಿಸಿ, ಮಾಹಿತಿ ಪಡೆದುಕೊಂಡ ಅವರು ಮಾರಿಯಮ್ಮ ಸನ್ನಿದಿಯು ಅತೀ ಶೀಘ್ರದಲ್ಲಿ ಉತ್ತಮ ಪವಾಢ ಹೊಂದಿದ ಕ್ಷೇತ್ರವಾಗಿ ಮೂಡಿ ಬರಲಿ. ಅದಕ್ಕಾಗಿ ನಮ್ಮ ಕುಟುಂಬ ಮತ್ತು ಅಭಿಮಾನಿಗಳ ಪರವಾಗಿಯೂ 99 ಶಿಲಾ ಸೇವೆಯ ಪ್ರತೀಕವಾಗಿ 99,999 ರೂ. ಹಣವನ್ನು ದೇಣಿಗೆ ರೂಪದಲ್ಲಿ ನೀಡಿದರು.
ಈ ಸಂದರ್ಭ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ , ಅರ್ಚಕರಾದ ಶ್ರೀನಿವಾಸ ತಂತ್ರಿ ಕಲ್ಯ, ಜೀರ್ಣೊದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ , ಕೋಶಾದಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.