ಬೆಂಗಳೂರು, ಜ 21(MSP): ಮೀನುಗಾರಿಕೆಗೆ ತೆರಳುವ ಬೋಟುಗಳ ಚಲನವಲನಗಳನ್ನು ಸ್ಪಷ್ಟವಾಗಿ ತಿಳಿಸುವ ಸಲುವಾಗಿ ಅತ್ಯಾಧುನಿಕ ಸ್ಯಾಟಲೈಟ್ ಫೋನ್, ರಾಡಾರ್, ಜಿಪಿಎಸ್ ಸೇವೆಯನ್ನು ಮೀನುಗಾರರಿಗೆ ದೊರಕಿಸಿಕೊಡುವ ಅಗತ್ಯ ಇದೆ ಎಂದು ಸಚಿವೆ ಡಾ| ಜಯಮಾಲಾ ಹೇಳಿದರು.
ಮೊಗವೀರ ಸಂಘದಿಂದ ಹಮ್ಮಿಕೊಂಡಿದ್ದ ಮೊಗವೀರ ಸ್ಮೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಳ ಸಮುದ್ರ ಮೀನಿಗಾರಿಕೆಗೆ ತೆರಳಿ ಅರಬ್ಬಿ ಸಮುದ್ರದಲ್ಲಿ ಕಣ್ಮರೆಯಾಗಿರುವ ಏಳು ಮಂದಿ ಮೀನುಗಾರರು ಸುರಕ್ಷಿತರಾಗಿ ಸಾಧ್ಯವಾದಷ್ಟು ಬೇಗ ಮರಳಿ ಬರುವಂತಾಗಲಿ, ಇವರ ಪತ್ತೆಗಾಗಿ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
ಸರ್ಕಾರದ ಜತೆ ಮೀನುಗಾರರ ಸುರಕ್ಷತೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಲಾಗಿದೆ.ಕಣ್ಮರೆಯಾದ ಮೀನುಗಾರರ ಶೋಧಕಾರ್ಯಕ್ಕೆ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಹಾಗೂ ಗೋವಾ ಸರಕಾರಗಳ ಸಹಾಯ ಪಡೆಯಲಾಗುತ್ತಿದೆ ಎಂದರು.
ಶಾಸಕ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಬೆಂಗಳೂರು ಮೊಗವೀರ ಸಂಘದ ಅಧ್ಯಕ್ಷ ಬಿ.ಎನ್.ನರಸಿಂಹ ಉಪಸ್ಥಿತರಿದ್ದರು.