ತುಮಕೂರು,ಜ 21(MSP): ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಅಲ್ಪ ಸುಧಾರಣೆ ಕಂಡು ಬಂದಿದೆ ಎಂದು ಸ್ವಾಮೀಜಿ ಅವರ ಆಪ್ತ ವೈದ್ಯ ಡಾ.ಪರಮೇಶ್ ಹೇಳಿದರು. ಭಕ್ತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಧ್ಯ ಬೆಂಗಳೂರಿನ ನುರಿತ ವೈದ್ಯರೊಂದಿಗೆ ಸಲಹೆ ಪಡೆದು ನಾವೇ ಚಿಕಿತ್ಸೆ ಮುಂದುವರಿಸಿದ್ದೇವೆ. ಇನ್ನು ಬೆಂಗಳೂರಿನಿಂದಲೂ ಕೆಲ ವೈದ್ಯರ ತಂಡ ಚಿಕಿತ್ಸೆ ನೀಡಲು ಆಗಮಿಸುತ್ತಿದ್ದಾರೆ ಎಂದು ಹೇಳಿದರು.
ಬೆಳಿಗ್ಗೆ ಇದ್ದ ಸ್ಥಿತಿಗೆ ಹೋಲಿಸಿದರೆ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದರಿಂದ ಮಠದ ಭಕ್ತರು ಆತಂಕಕ್ಕೆ ಒಳಗಾಗಬೇಕಿಲ್ಲ ಸ್ವಾಮೀಜಿ ದರ್ಶನಕ್ಕೆ ಭಕ್ತರು ಮಠಕ್ಕೆ ಬರುವುದು ಬೇಡ. ತಾವೆಲ್ಲಿದ್ದಾರೊ ಅಲ್ಲಿಂದಲೇ ಸ್ವಾಮೀಜಿ ಆರೋಗ್ಯ ವೃದ್ದಿಗೆ ಪ್ರಾರ್ಥನೆ ಮಾಡಲಿ ಎಂದರು