ಮಂಗಳೂರು,ಜ 23(MSP): ವಿದೇಶಿ ಮೂಲದ ವೆಬ್ ಸೈಟ್ ನಡೆಸಿದ ಪ್ರಪಂಚದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಭಾರತ ದೇಶದಿಂದ ಅಚ್ಚರಿದಾಯಕವಾಗಿ ಕಡಲ ನಗರಿ ಮಂಗಳೂರು ಮಾತ್ರವೇ ಸ್ಥಾನ ಪಡೆದುಕೊಂಡಿದೆ.
ಅಮೆರಿಕಾದ ಚಿಕಾಗೋ ಮೂಲದ ಟ್ರಿಬ್ಯೂನ್ ಪತ್ರಿಕೆಯ ಸೋದರ ಸಂಸ್ಥೆ ‘ದಿ ಡೈಲಿ ಮೇಲ್’ಎನ್ನುವ ಪ್ರವಾಸ ಹಾಗೂ ಆಹಾರ ಕುರಿತ ವೆಬ್ ಸೈಟ್ ನಡೆಸಿದ ವಿಶ್ವದ ಸುರಕ್ಷಿತ ನಗರಗಳ ಸಮೀಕ್ಷೆಯಲ್ಲಿ ಭಾರತದಿಂದ ಮಂಗಳೂರು ಮಾತ್ರವೇ ಸ್ಥಾನ ಪಡೆದುಕೊಂಡಿದೆ.
ಟೂರಿಸ್ಟ್ ಗಳಿಗೆ ಪ್ರವಾಸ ಕೈಗೊಳ್ಳುವುದಕ್ಕೆ ಸುರಕ್ಷತೆಯ ವಿಚಾರ ಅತಿ ಮುಖ್ಯ. ಇದೇ ಹಿನ್ನಲೆಯಲ್ಲಿ ಯಾವ ನಗರದಲ್ಲಿ ಯಾವ ಸಮಸ್ಯೆ ಎದುರಿಸಬೇಕಾಗುತ್ತದೆ? ಯಾವ ನಗರ ಪ್ರವಾಸಿಗರಿಗೆ ಅನುಕೂಲ ಇತ್ಯಾದಿ ವಿಚಾರಗಳನ್ನು ಡೈಲಿ ಮೇಲ್ ಸಮೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದೆ. 1ರಿಂದ 100ರ ವರೆಗೆ ಅಂಕೆಯ ಸ್ಕೇಲ್ನಲ್ಲಿ ಗರಿಷ್ಠ ಅಂಕ ಗಳಿಸಿದ ನಗರ ಅತಿ ಸುರಕ್ಷಿತ ಎಂದು ತಿಳಿಸಲಾಗಿದೆ. ಟಾಪ್-50 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನವನ್ನು ಕತಾರ್ನ ದೋಹಾ ತನ್ನದಾಗಿಸಿದೆ, ಎರಡನೇ ಸ್ಥಾನವನ್ನು ಅಬುಧಾಬಿ ಪಡೆದಿದೆ. ಈ ಪಟ್ಟಿಯಲ್ಲಿ ಮಂಗಳೂರು 31ನೇ ಸ್ಥಾನದಲ್ಲಿದೆ. ಸುರಕ್ಷಿತೆಯ ಮೌಲ್ಯಮಾಪನದಲ್ಲಿ ಮಂಗಳೂರು 75.62 ಅಂಕಗಳನ್ನು ಕಲೆ ಹಾಕಿದೆ.