ಮಂಗಳೂರು ,ಜ 23(MSP): ಬಜ್ಪೆ ಬಳಿಯ ಕರಂಬಾರಿನಲ್ಲಿನ ಪ್ಲಾಟ್ನಲ್ಲಿ ವಾಸಿಸುತ್ತಿದ್ದ ಗಂಡಹೆಂಡತಿಯ ಮಧ್ಯೆ ಇದ್ದ ವೈಮನಸ್ಸಿನಿಂದ ಗಂಡ ಹೆಂಡತಿಯನ್ನು ಕತ್ತಿಯಿಂದ ಕಡಿದ ತಾನೂ ಬಳಿಕ ಆತ್ಮಹತ್ಯೆ ಯತ್ನಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ದಂಪತಿಗಳನ್ನು ಸಂಜಯ್ ಶೆಟ್ಟಿ(45)ಮತ್ತು ಶುಭವಾಣಿ(36) ಎಂದು ಗುರುತಿಸಲಾಗಿದೆ.
ಶುಭವಾಣಿಗೆ ಈ ಹಿಂದೆ ಸುಕೇಶ್ ಎಂಬವರೊಂದಿಗೆ ವಿವಾಹವಾಗಿದ್ದು ಆತ ತೀರಿಕೊಂಡಿದ್ದ. ಇನ್ನು ಸಂಜಯ್ ಕೂಡ ವಿವಾಹವಾಗಿದ್ದು ಅವರ ಪತ್ನಿಯೂ ತೀರಿಕೊಂಡರು.ಈ ಹಿನ್ನಲೆಯಲ್ಲಿ ಶುಭವಾಣಿ ಮತ್ತು ಸಂಜಯ್ ಪರಿಚಯ ಮಾಡಿಕೊಂಡ ವಿವಾಹವಾಗಿದ್ದರು. ಇವರಿಬ್ಬರೂ ಬಡ್ಡಿ ಹಾಗೂ ಚೀಟಿ ವ್ಯವಹಾರ ನಡೆಸುತ್ತಿದ್ದರು. ಇದರಿಂದ ಬಂದ ಹಣದಲ್ಲಿ ಕೆಂಜಾರು ಸಮೀಪ ಫ್ಲಾಟ್ ಖರೀದಿ ಮಾಡಿದ್ದರು. ಮಾಲಿಕತ್ವದ ವಿಚಾರದಲ್ಲಿ ಇವರಿಬ್ಬರ ಮಧ್ಯೆ ವೈಮನಸ್ಸು ಆರಂಭವಾಗಿತ್ತು. ಈ ಹಿನ್ನಲೆಯನ್ನು ಪದೇ ಪದೇ ಜಗಳವಾಗುತ್ತಿತ್ತು. ಇದೇ ಬೇಸರದಿಂದ ಶುಭವಾಣಿ ತನ್ನ 14 ವರ್ಷದ ಮಗಳ ಜತೆ ಮನೆಬಿಟ್ಟು ತಾಯಿ ಮನೆಗೆ ಹೋಗಿದ್ದರು.
ಮಂಗಳವಾರ ಮಧ್ಯಾಹ್ನ ಕಟೀಲು ದೇವಳಕ್ಕೆ ಹೋಗಿ ಬಂದು ಸಂಜೆ ವೇಳೆ ಮಗಳ ಜತೆ ಶುಭವಾಣಿ ಪ್ಲಾಟ್ಗೆ ಹೋಗಿದ್ದರು.ಆ ಸಮಯದಲ್ಲಿ ಗಂಡ ಸಂಜಯ್ ಶೆಟ್ಟಿ ಯೊಂದಿಗೆ ಗಲಾಟೆ ನಡೆದಿತ್ತು. ಇದೇ ವೇಳೆ ಮಾತಿಗೆ ಮಾತು ಬೆಳೆದು ಸಂಜಯ್ ಶೆಟ್ಟಿ ಶುಭವಾಣಿಯನ್ನು ಕತ್ತಿಯಿಂದ ಕುತ್ತಿಗೆಗೆ, ಬೆನ್ನಿಗೆ, ಎದೆಗೆ ,ತಲೆಗೆ, ಕೈಗೆ ಕಡಿದು ಗಾಯ ಗೊಳಿಸಿದ್ದಾನೆ. ಈ ವೇಳೆ ಶುಭವಾಣಿ ಮತ್ತು ಮಗಳು ಬೊಬ್ಬೆ ಹಾಕಿ ಕೆಳಗೆ ಓಡಿ ಬಂದಿದ್ದಾರೆ. ಇದಾದ ಬೆನ್ನಲ್ಲೇ ಸಂಜಯ್ ಕೂಡಾ ಫಿನಾಯಿಲ್ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ್ಯ ತಿಳಿದ ಸ್ಥಳೀಯರು ಕೂಡಲೇ ಗಂಬೀರ ಗಾಯಗೊಂಡ ಶುಭವಾಣಿ ಅವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಜಯ್ ಶೆಟ್ಟಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಜಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಜಯ್ ವಿರುದ್ದ ಕೊಲೆ ಯತ್ನ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.