ಉಡುಪಿ, ಜ 23(MSP): ಉಡುಪಿಯ ಪ್ರಭಾವಿ ಕಾಂಗ್ರೆಸ್ ಮುಖಂಡ ಸೇರಿದಂತೆ ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಜಕಾರಣಿ ಮತ್ತು ಉದ್ಯಮಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮತ್ತು ಕ್ರಷರ್ ಮಾಲೀಕ ಜಾಯ್ ಅವರ ಕಾರ್ಖಾನೆ, ಮನೆ ಮತ್ತು ಕಚೇರಿಗಳ ಮೇಲೆ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಏಕ ಕಾಲಕ್ಕೆ ದಾಳಿ ನಡೆದಿದೆ.
ಮುನಿಯಾಲಿನಲ್ಲಿರುವ ಉದಯ್ ಕುಮಾರ್ ಅವರ ಮನೆ, ಗೇರು ಕಾರ್ಖಾನೆ, ಕೋಟದಲ್ಲಿರುವ ಫಿಶ್ ಮಿಲ್ ಸಹಿತ ಕಚೇರಿ , ಮನೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಕಡತಗಳನ್ನು ಪರಿಶೀಲಿನೆ ನಡೆಸುತ್ತಿದ್ದಾರೆ.
ಬೆಂಗಳೂರಿನಿಂದ ಬಂದ 150ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ . ದಾಳಿಗಾಗಿ 60 ವಾಹನಗಳನ್ನು ಮಂಗಳೂರಿನಿಂದ ಬುಕ್ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.