ಕಾರ್ಕಳ, ಜ 23(SM): ಗೋಹತ್ಯೆ ಹಾಗೂ ಮತಾಂತರದ ವಿರುದ್ಧ ಬಜರಂಗ ದಳ ಸಕ್ರಿಯಾವಾಗಿ ಹೋರಾಟಕ್ಕೆ ಮುಂದಾಗಿದೆ. ಸರಕಾರದ ಹಾಗೂ ಪೊಲೀಸ್ ಇಲಾಖೆ ಮೃದು ಧೋರಣೆಯಿಂದ ಹೊರಬಾರದೇ ಇದಲ್ಲಿ ಸಂಘಟನೆ ಹೊಣೆಯಾಗಲಾರದು ಎಂದು ಬಜರಂಗದಳ ತಾಲೂಕು ಸಂಚಾಲಕ ಗುರುಪ್ರಸಾದ್ ನಾರಾವಿ ಎಚ್ಚರಿಸಿದ್ದಾರೆ.
ಬಜರಂಗದಳ ತಾಲೂಕು ಸಂಚಾಲಕರಾಗಿ ನೇಮಕಗೊಂಡ ಬಳಿಕ ಪ್ರಪ್ರಥಮವಾಗಿ ಆಯೋಜಿಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೃಷಿ ಕಾಯಕವನ್ನೇ ಆಶ್ರಯಿಸಿಕೊಂಡು ಜಾನುವಾರುಗಳನ್ನು ಸಾಕುತ್ತಿದ್ದು, ರಾತ್ರೋ ರಾತ್ರಿ ಎಗ್ಗಿಲ್ಲದೇ ಮಾರಾಕಾಯುಧ ತೋರಿಸಿ ಬೆದರಿಸಿ ಕೊಟ್ಟಿಗೆಗೆ ನುಗ್ಗಿ ಬೆಲೆ ಬಾಳುವ ಜಾನುವಾರುಗಳನ್ನು ಕದ್ದು ಕೊಂಡು ಹೋಗುತ್ತಿರುವ ಪ್ರಕರಣದ ಹೆಚ್ಚುತ್ತಿದೆ.
ತಾಲೂಕಿನ ನಿಟ್ಟೆ, ಈದು, ಪೇರಲ್ಕೆ ಪ್ರದೇಶಗಳಲ್ಲಿ ಗೋಕಳ್ಳತನ ಎಗ್ಗಿಲ್ಲದೇ ನಡೆಯುತ್ತಿದೆ. ಇದಕ್ಕೆಲ್ಲ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು. ಪೊಲೀಸ್ ಇಲಾಖೆ ಗೋಕಳ್ಳರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗದಿದ್ದಲ್ಲಿ ಅಂತವರ ವಿರುದ್ಧ ಮುಂದಿನ ದಿನಗಳಲ್ಲಿ ಬಜರಂಗದಳವೇ ಕ್ರಮ ಕೈಗೊಳ್ಳಬೇಕಾಗಬಹುದು ಎಂದು ಅವರು ಎಚ್ಚರಿಸಿದರು.