ಉಡುಪಿ,ಜ 25(MSP): ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಚಂದ್ರ ಕೆ.ಹೆಮ್ಮಾಡಿಗೆ ಒಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನವನ್ನು ಹಾಗೂ 20 ಪ್ರಕರಣಗಳಲ್ಲಿ ಬಾಡಿ ವಾರಂಟನ್ನು ಫೆ.7ರವರೆಗೆ ವಿಸ್ತರಿಸಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.
ತನಿಖಾಧಿಕಾರಿ ಮನವಿ ಮೇರೆಗೆ ಉಡುಪಿ ಜಿಲ್ಲಾ ವಿಶೇಷ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ ಜೋಷಿ ಅವರು ನ್ಯಾಯಾಂಗ ಬಂಧನ ಮತ್ತು ಬಾಡಿ ವಾರಂಟ್ ವಿಸ್ತರಿಸಿ ಆದೇಶಿಸಿದರು. ಸರಕಾರದ ಪರವಾಗಿ ವಿಶೇಷ ಅಭಿ ಯೋಜಕ ವಾಸು ಪೂಜಾರಿ ಹಾಜರಿದ್ದರು.