ಮಂಗಳೂರು, ಜ 25(MSP): ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಮಾಡಿರುವುದನ್ನು ಕಂಡು ಪ್ರಧಾನಿ ನರೇಂದ್ರ ಮೋದಿಯನ್ನು ನಿದ್ದೆಗೆಡಿಸಿಸುವಂತೆ ಮಾಡಿದೆ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ಅವರಲ್ಲಿ ದೇಶದ ಜನತೆ ಇಂದಿರಾ ಗಾಂಧಿಯವರನ್ನು ಕಾಣುತ್ತಿದ್ದಾರೆ. ಹೀಗಾಗಿ ಮುಂದೆ ದೇಶದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಪ್ರಿಯಾಂಕಾ ವಾದ್ರಾ ಪಕ್ಷವನ್ನು ಮುನ್ನಡೆಸಬಲ್ಲ ಒಬ್ಬ ಸಮರ್ಥ ನಾಯಕಿ ಎಂದು ಹೇಳಿದರು.
ಇದೇ ವೇಳೆ ಅವರು ದ.ಕ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸ್ವರ್ಧಿಸಲು ನಾನು ಉತ್ಸುಕನಾಗಿದ್ದು, ಟಿಕೆಟ್ ಗಾಗಿ ಶಿಘ್ರವೇ ದಿಲ್ಲಿಗೆ ತೆರಳುವೆ.ಪಕ್ಷ ನನಗೆ ಟಿಕೆಟ್ ನೀಡದಿದ್ದರೆ, ಟಿಕೆಟ್ ಪಡೆದವರ ಪರವಾಗಿ, ಪಕ್ಷದ ಕೆಲಸ ಮಾಡುತ್ತೇನೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಯಾವುದೇ ಕಾರಣಕ್ಕೂ ಪಕ್ಷವು ಟಿಕೆಟ್ ನೀಡಲ್ಲ. ಅವರಿಗೆ ಎಲ್ಲವೂ ಬೇಕು ಎಂಬ ಆಸೆ ಇದೆ. ಮೊದಲು ಅವರು ಆಸೆಯನ್ನು ಬಿಡಬೇಕು’ ಎಂದರು.