ಕಾಸರಗೋಡು, ಅ25: ಚಲಿಸುತ್ತಿದ್ದ ಬಸ್ನಿಂದ ಹೊರಕ್ಕೆಸೆಯಲ್ಪಟ್ಟು ಸ್ನಾತಕೋತ್ತರ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ಅ 25 ರ ಬುಧವಾರ ಬೆಳಿಗ್ಗೆ ಚೇಡಿಕಾನ ಬಳಿ ನಡೆದಿದೆ.ನೆಕ್ರಾಜೆ ಬಳಿಯ ಚೇಡಿಕಾನದ ಉಷಾಲತ (19) ಮೃತಪಟ್ಟವಳು. ಈಕೆ ಬದಿಯಡ್ಕ ಕೋ-ಆಪರೇಟಿವ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದಳು.ಉಷಾಲತ ಕಾಲೇಜಿಗೆ ತೆರಳಲೆಂದು ಬಸ್ಸಿನಲ್ಲಿ ತೆರಳುತ್ತಿದ್ದಾಗ ಸುಮಾರು 9.30ಕ್ಕೆ ಈ ಘಟನೆ ನಡೆದಿದೆ.
ಕಾಸರಗೋಡಿನಿಂದ ಪೆರ್ಲಕ್ಕೆ ತೆರಳುತ್ತಿದ್ದ ಬಸ್ಸಿಗೆ ಚೇಡಿಕಾನದಿಂದ ಹತ್ತಿ ದ್ದು ಬಸ್ನಲ್ಲಿ ಪ್ರಯಾಣಿಕರು ಕಿಕ್ಕಿರಿದಿದ್ದು ದರಿಂದ ಮುಂಭಾಗದ ಬಾಗಿಲ ಬಳಿ ಈಕೆ ನಿಂತಿದ್ದ ನ್ನಲಾಗಿದೆ. ಬಸ್ ಮುಂದಿನ ಸ್ಟಾಪ್ಗೆ ತಲುಪುತ್ತಿದ್ದಂತೆ ಉಷಾಲತಳ ಕಾಲೇಜಿನ ಬ್ಯಾಗ್ ಬಾಗಿಲಿನ ಚಿಲಕಕ್ಕೆ ತಾಗಿ ಬಾಗಿಲು ತೆರೆಯಲ್ಪಟ್ಟಿತು. ಕೂಡಲೇ ಉಷಾಲತ ಬಸ್ನಿಂದ ಹೊರಗೆಸೆಯಲ್ಪಟ್ಟಿದ್ದು . ರಸ್ತೆಗೆ ಬಿದ್ದ ಆಕೆಯ ದೇಹದ ಮೇಲೆ ಬಸ್ನ ಹಿಂಬದಿ ಚಕ್ರ ಹರಿದಿ ದ್ದು ಗಂಭೀರ ಗಾಯಗೊಂಡ ಆಕೆಯನ್ನು ಬಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ದಾರಿ ಮಧ್ಯೆ ಮೃತಪಟ್ಟಳು.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು,. ಅಪಘಾತ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡು ಬಸ್ಸನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಉಷಾಲತಾಳ ವಿವಾಹ ಮುಂದಿನ ಮಾರ್ಚ್ ನಲ್ಲಿ ನಿಗದಿಯಾಗಿತ್ತು