ಉಡುಪಿ, ಜ26(SS): ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಬರಬೇಕು ಅನ್ನೋದು ನಮ್ಮ ಆಶಯವಾಗಿತ್ತು. ಬಂದಿದ್ದರೆ ತುಂಬಾ ಸಂತೋಷ ಆಗುತಿತ್ತು ಎಂದು ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳು ಭಾರತ ರತ್ನ ಪ್ರಶಸ್ತಿ ಮೀರಿ ಬೆಳೆದವರು. ನೆಪ ಮಾತ್ರಕ್ಕೆ ಭಾರತ ರತ್ನ ಬೇಕು ಅಂದುಕೊಂಡಿದ್ದೆವು. ಮುಂದಿನ ವರ್ಷವಾದರೂ ಶ್ರೀಗಳಿಗೆ ಪ್ರಶಸ್ತಿ ಬರಲಿ. ಕರ್ನಾಟಕದಲ್ಲಿ ಅನೇಕರಿಗೆ ಪ್ರಶಸ್ತಿ ಬಂದಿದೆ. ಇನ್ನಷ್ಟು ಸಾಧಕರಿಗೆ ಪ್ರಶಸ್ತಿ ಬರಲಿ ಎಂದು ಹಾರೈಸಿದರು.
ಕಲಾವಿದರಿಗೆ ಭಾಷೆಯ ಗಡಿ ಹಾಕಬೇಡಿ. ತಂದೆ ಕೊಟ್ಟಂತಹ ಕೊಡುಗೆಯಿಂದ ಚಿತ್ರರಂಗ ಬೆಳೆಸಿದವರು ಪ್ರಭುದೇವ ಕುಟುಂಬದವರು. ಅವರಿಗೆ ಪ್ರಶಸ್ತಿ ಬಂದದ್ದು ತುಂಬಾ ಖುಷಿಯಾಗಿದೆ ಎಂದು ಹೇಳಿದರು.
ಪ್ರಣವ್ ಮುಖರ್ಜಿಗೆ ಭಾರತರತ್ನ ನೀಡಿದ್ದ ವಿಚಾರವಾಗಿ ಮಾತನಾಡಿ, ಅವರಿಗೆ ಭಾರತ ರತ್ನ ನೀಡಿದ್ದರಲ್ಲಿ ಯಾವುದೇ ರಾಜಕೀಯ ಇಲ್ಲ. ಅಂತಹ ಒಳ್ಳೆಯ ಕೆಲಸ ಮಾಡಿದ್ದಾರೆ ಮುಖರ್ಜಿ. ಭಾರತ ರತ್ನಕ್ಕೆ ಪ್ರಣವ್ ಮುಖರ್ಜಿ ಅರ್ಹರು ಮತ್ತು ತುಂಬಾ ಖುಷಿಯಾಗಿದೆ. ಈ ಪ್ರಶಸ್ತಿಗೆ ಯಾವುದೇ ಮಾನದಂಡ ಇಲ್ಲ. ಅದು ಯೋಗದಿಂದ ಮಾಡಿದ ಸಾಧನೆಯನ್ನು ಗುರುತಿಸಿ ಕೊಡುವಂತದ್ದು. ಅರ್ಹರಾದವರಿಗೆ ಸಮಯ ಬಂದಾಗ ಆ ಪ್ರಶಸ್ತಿ ಸಿಗುತ್ತೆ. ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯವರಿಗೆ ಏನೂ ಮಾಡುವುದಕ್ಕೆ ಆಗಲ್ಲ ಎಂದು ಹೇಳಿದರು.