ಕಾರ್ಕಳ, ಜ27(SS): ಕಾರ್ಲದ ದೇವೆರ್, ನಾಡಿನ ಪವಾಡ ಪುರುಷ ಅತ್ತೂರು ಸಂತ ಲಾರೆನ್ಸರ ಬಸಿಲಿಕಾ ಪುಣ್ಯ ಕ್ಷೇತ್ರ ವಾರ್ಷಿಕ ಮಹೋತ್ಸವಕ್ಕೆ ಮತ್ತೆ ಸಿದ್ಧಗೊಂಡಿದೆ. ಅತ್ತೂರು ಜಾತ್ರೆ, ಸಾಂತ್ಮಾರಿ ಮುಂತಾದ ಹೆಸರಿನಲ್ಲಿ ಕರೆಯಲ್ಪಡುವ ಅತ್ತೂರು ಜಾತ್ರೆ ಇಂದಿನಿಂದ ಜ.31ವರೆಗೆ ನಡೆಯಲಿದೆ.
ಸರ್ವಧರ್ಮ ಸಮ್ಮಿಲನದ ಕ್ಷೇತ್ರ ಹಾಗೂ ಪವಾಡ ಕ್ಷೇತ್ರ ಎನಿಸಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರು ಸಂತ ಲಾರೆನ್ಸರ ಬಸಿಲಿಕಾ ಚರ್ಚ್ ಸಾಂತ್ಮಾರಿ ಆರಂಭಗೊಂಡಿದ್ದು, ಧರ್ಮಗುರುಗಳಾದ ಜಾರ್ಜ್ ಡಿ ಸೋಜ ಧ್ವಜಾರೋಹಣ ಮಾಡುವ ಮೂಲಕ 5 ದಿನಗಳ ಹಬ್ಬಕ್ಕೆ ಚಾಲನೆ ನೀಡಿದ್ದಾರೆ. ಸರ್ವಧರ್ಮಿಯರ ಆರಾಧನ ಕೇಂದ್ರ ಅತ್ತೂರು ಚರ್ಚ್ ಸಾಂತ್ಮಾರಿ ಇಂದಿನಿಂದ ಆರಂಭಗೊಂಡು ಜ.31ರ ತನಕ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ವ್ಯಾಪಕ ಸಂಖ್ಯೆಯ ಭಕ್ತರಿಗಾಗಿ ಸರ್ವ ಸಿದ್ಧತೆ ಮಾಡಲಾಗಿದೆ. ಇಂದು ಬೆಳಗ್ಗಿನ ಪ್ರಥಮ ಪೂಜೆಯನ್ನು ವಂದನೀಯ ಫಾದರ್ ಚೇತನ್ ಲೋಬೊ ನೆರವೇರಿಸಿದ್ದಾರೆ.