ಮಂಗಳೂರು, ಜ 28 (MSP): ಸಂವಿಧಾನ, ದೇಶದ ಸಂಸತ್ ಮೇಲೆಯೇ ಗೌರವ ಇಲ್ಲದ ಕೇಂದ್ರ ಸಚಿವ ಅನಂತ ಕುಮಾರ್ ಅವರು ಗ್ರಾಮ ಪಂಚಾಯತ್ ಸದಸ್ಯನಾಗಲು ಯೋಗ್ಯ ವ್ಯಕ್ತಿಯಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರದ ಸರ್ಕ್ಯೂಟ್ ಹೌಸ್ಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಅನಂತ್ ಕುಮಾರ್ ಅವರಿಗೆ ’ಹೇಳಿಕೆ ನೀಡುವುದು ಹೊಸತೇನಲ್ಲ’ ಎಂದಿದ್ದಾರೆ.
ಅವರ ನೀಡುವ ಸಂವಿಧಾನ ಬಾಹಿರ ಹೇಳಿಕೆಗಳಿಗೆ ಮುಂದೆ ಜನತೆಯೇ ತಕ್ಕುದಾದ ಉತ್ತರ ನೀಡುತ್ತಾರೆ. ಹೀಗಾಗಿ ನಾವು ಅವರ ಬಗ್ಗೆ ಮಾತನಾಡುವುದು ತಪ್ಪು ಅನಿಸುತ್ತದೆ. ಅವರು ಕೋಮು ಗಲಭೆ ಸೃಷ್ಟಿಸುವ ದುರುದ್ದೇಶ ಅವರ ಹೇಳಿಕೆಯಲ್ಲಿದೆ. ಇದು ಕೇಂದ್ರ ಸಚಿವರಿಗೆ ಘನತೆ ತರುವ ಮಾತುಗಳಲ್ಲ . ಇವರಿಗೆ ಮುಂದಿನ ಚುನಾವಣೆಯಲ್ಲಿ ಜನರೆ ತಕ್ಕದಾದ ಪಾಠ ಕಲಿಸುತ್ತಾರೆ. ಅವರು ಸಂಸತ್ತಿನಲ್ಲಿ ಪ್ರವೇಶಿಸಲು ಮಾತ್ರವಲ್ಲ ಒಬ್ಬ ಗ್ರಾಮ ಪಂಚಾಯತ್ ಸದಸ್ಯನಾಗಲು ಕೂಡಾ ಅನರ್ಹ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.