ಧರ್ಮಸ್ಥಳ ಅ 26 : ಪ್ರಧಾನಿ ನರೇಂದ್ರ ಮೋದಿ ಅವರು ಅ 29 ರಂದು ಧರ್ಮಸ್ಥಳ ಹಾಗೂ ಉಜಿರೆಗೆ ಆಗಮಿಸುವ ಹಿನ್ನಲೆಯಲ್ಲಿ ಭದ್ರತಾ ದೃಷ್ಟಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನವನ್ನು 28 ರ ಮಧ್ಯಾಹ್ನ 2 ಗಂಟೆಯಿಂದ 29 ರ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ಅವಕಾಶವನ್ನು ನಿರ್ಬಂಧಿಸಲಾಗಿದೆ. ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ. ಇನ್ನು ಈ ಹಿನ್ನಲೆಯಲ್ಲಿ ಅ 29 ರಂದು ಎಡಿಜಿಪಿ ಅಲೋಕ್ ಮೋಹನ್, ಧರ್ಮಸ್ಥಳಕ್ಕೆ ಆಗಮಿಸಿ ಹೆಲಿಪ್ಯಾಡ್ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆ ಬಳಿಕ ಧರ್ಮಾಧಿಕಾರಿ ಡಾI ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಕಾರ್ಯಕ್ರಮದ ಬಗ್ಗೆ ಚರ್ಚಿಸಿದರು.
ಮೋದಿ ಭೇಟಿ ಹಿನ್ನಲೆ ಉಜಿರೆ ಅಂಗಡಿ ಮುಂಗಟ್ಟು ಬಂದ್
ಫ್ರದಾನಿ ಆಗಮನ ಸಂದರ್ಭ ಭದ್ರತೆಗಾಗಿ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ವ್ಯಾಪರಸ್ಥರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು ಹೀಗಾಗಿ ಅ,28ರ ಮದ್ಯಾಹ್ನದಿಂದ ಅ.29ರ ಮದ್ಯಾಹ್ನದವರೆಗೆ ಉಜಿರೆ ನೇತ್ರಾವತಿ ಕನ್ಯಾಡಿ ಧರ್ಮಸ್ಥಳದಲ್ಲಿ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ.