ಉಡುಪಿ, ಜ 29(SM): ಸಿದ್ದರಾಮಯ್ಯರಿಂದ ಮಹಿಳೆಗೆ ಅವಮಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ರೇವಣ್ಣ, ಕೆಲವು ಸನ್ನಿವೇಶದಲ್ಲಿ ಸಣ್ಣ ಪುಟ್ಟ ತೊಂದರೆಗಳು ಆಗುತ್ತವೆ. ಸಿದ್ದರಾಮಯ್ಯ ಆ ಥರ ಸ್ವಭಾವದ ವ್ಯಕ್ತಿಯಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಸಚಿವ ರೇವಣ್ಣ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯ ಅವರ ಸ್ವಭಾವ ನನಗೆ ಚೆನ್ನಾಗಿ ಗೊತ್ತು. ಅವರು ಹಾಗೇನೂ ಮಾಡೋಕೆ ಹೋಗಿಲ್ಲ. ಮಾತನಾಡುತ್ತಿದ್ದಂತೆ ಏನಮ್ಮಾ ಅಂಥ ಕೇಳೋಕೆ ಹೋಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಸರಕಾರದ ಸುಭದ್ರತೆಯ ಬಗ್ಗೆ ಪ್ರಶ್ನಿಸಿದಾಗ "ಯಾರೂ ಅಲೋಚನೆ ಮಾಡೋದು ಬೇಡ. ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಕುಮಾರಸ್ವಾಮಿಯೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.