ಕಾರ್ಕಳ,ಜ 30 (MSP): ದಕ್ಷಿಣ ಭಾರತದ ಕ್ರೈಸ್ತರ ಧರ್ಮಾಲಯಗಳಲ್ಲಿ ಪುಷ್ಕರಣಿ ಇದ್ದರೆ ಅದು ಅತ್ತೂರಿನಲ್ಲಿ ಮಾತ್ರ. ಹೀಗಾಗಿ ಈ ಪುಣ್ಯ ಕ್ಷೇತ್ರ ಅಗ್ರಸ್ಥಾನ ಪಡೆದಿದೆ. ಮುಳಿಹುಲ್ಲಿನ ಇಗರ್ಜಿ ಶಿಥಿಲಗೊಂಡಾಗ ಗೋವಾ ಮೂಲದ ಧರ್ಮಗುರುಗಳು ಕಾಷ್ಠಶಿಲ್ಪದ ಸಂತ ಲಾರೆನ್ಸ್ರ ವಿಗ್ರಹದೊಂದಿಗೆ ಹೊಸ ಪುಣ್ಯಕ್ಷೇತ್ರ ನಿರ್ಮಿಸಲು ಯೋಗ್ಯ ಸ್ಥಳ ಅರಸಿ ಹೊರಟಿದ್ದರು. ಪರ್ಪಲೆಗುಡ್ಡೆ ಇಳಿದು ವಿಗ್ರಹ ನೆಲದಲ್ಲಿ ಇಟ್ಟು ಸನಿಹದಲ್ಲಿ ಹರಿಯುತ್ತಿದ್ದ ನೀರಿನ ಒರತೆಯಿಂದ ಬಾಯಾರಿಕೆ ನೀಗಿಸಿಕೊಂಡರು.
ಪುಷ್ಕರಣಿಯ ಜಲ ಸಂಪ್ರೋಕ್ಷಿಸಲು ಸರದಿ ಸಾಲಿನಲ್ಲಿ ನಿಂತಿರುವ ಭಕ್ತಾದಿಗಳು
ಪಯಣ ಮುಂದುವರಿಸಲು ಬಯಸಿ ಹೊರಡಲು ಸಿದ್ಧವಾಗಿ ನೆಲದಲ್ಲಿ ಇಟ್ಟ ವಿಗ್ರಹವನ್ನು ಮೇಲಕ್ಕೇತ್ತಲು ಮುಂದಾದಾಗ ಕಿಂಚಿತ್ತು ಅಲುಗಡದೇ ಅವರಿಗೆ ಅಶ್ವರ್ಯ ಕಾದಿತು. ಸಂತ ಲಾರೆನ್ಸ್ ಅವರೇ ತಾವು ಇಲ್ಲಿಯೇ ತಂಗಲು ಬಯಸಿದ್ದಲ್ಲಿ ಅಲ್ಲಿಯೇ ಪುಣ್ಯಕ್ಷೇತ್ರ ನಿರ್ಮಿಸಲು ಮುಂದಾಗುತ್ತೇವೆ ಎಂದು ಶಪಥ ಮಾಡಿಕೊಂಡರು. ಮುಂದೆ ಇದೇ ಸ್ಥಳದಲ್ಲಿ 1759 ರಲ್ಲಿ ಪುಣ್ಯಕ್ಷೇತ್ರ ನಿರ್ಮಿಸಲಾಯಿತ್ತೆಂಬ ಮಹತ್ವದ ವಿಚಾರ ತಿಳಿದುಬಂದಿದೆ.
ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದಾಗಿದೆ. ಭಾರೀ ಪವಾಡದ ಈ ಕ್ಷೇತ್ರದಲ್ಲಿರುವ ಪುಷ್ಕರಿಣೆಯ ಜಲ(ತೀರ್ಥ) ಸಂಪ್ರೋಕ್ಷಣೆಗಾಗಿ ಭಕ್ತಾದಿಗಳು ಜಾತಿ,ಧರ್ಮ,ಬಾಷೆ,ಪಂಗಡ,ಲಿಂಗಭೇದ, ವಯಸ್ಸಿನ ಅಂತರ ಇವೆಲ್ಲವನ್ನು ಎಲ್ಲೇಮೀರಿ ಸರದಿ ಸಾಲಿನಲ್ಲಿ ಪುಷ್ಕರಿಣಿ ನೀರು ಸಂಪ್ರೋಕ್ಷಿಸುತ್ತಾರೆ. ಆರೋಗ್ಯ ಹಿತ ಕಾಪಾಡು ನಿಟ್ಟಿನಲ್ಲೂ ಇದೇ ಕೆರೆಯ ನೀರನ್ನು ಬಾಟಲುಗಳಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.