ಬೆಂಗಳೂರು ಅ 26: ಕಾವಿ ತೊಟ್ಟು ಸಮಾಜಕ್ಕೆ ಬುದ್ದಿ ಮಾತು ಹೇಳಬೇಕಿದ್ದ ಸ್ವಾಮೀಜಿ ಮತ್ತೊಂದು ಕಾಮದಾಟದ ಪುರಾಣ ರಾಜ್ಯದಲ್ಲಿ ಬಹಿರಂಗವಾಗಿದೆ. ಬೆಂಗಳೂರಿನ ಸಮೀಪದ ಮದ್ದೇವಣಾಪುರ ದೇವ ಸಿಂಹಾಸನದ ಜಂಗಮ ಮಠದ ಪೀಠಾಧ್ಯಕ್ಷರಾಗಲು ಹೊರಟ್ಟಿದ್ದ ಸ್ವಾಮೀಜಿ ದಯಾನಂದ್ ಎನ್ನುವಾತನ ರಾಸಲೀಲೆ ಎನ್ನುವ ವಿಡೀಯೋ ಬಹಿರಂಗವಾಗಿದ್ದು , ಗ್ರಾಮಸ್ಥರು ಸ್ವಾಮೀಜಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಸುಮಾರು ಐನೂರು ವರ್ಷಗಳ ಇತಿಹಾಸವಿರುವ ಮಠದಲ್ಲಿ ವೀರಶೈವ ಪರಂಪರೆ ಹೊಂದಿದೆ. ಈ ಮಠ ಸನ್ಯಾಸಿ ಮಠ ಹೋಗಿ ಸಂಸಾರಿಕ ಮಠವಾಗುತ್ತಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯ ಪುತ್ರ ದಯಾನಂದ್, ನಟಿ ಎಂದು ಹೇಳಲಾದ ಮಹಿಳೆಯೊಂದಿಗೆ ರಾಸಲೀಲೆ ನಡೆಸಿ ಸಿಕ್ಕಿಬಿದು ಮಠದ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಲ್ಲದೆ ಶಿವಾಚಾರ್ಯ ಸ್ವಾಮೀಜಿಯ ವಿರುದ್ದವೂ ಇಬ್ಬರನ್ನೂ ವಿವಾಹವಾಗಿ ಸಂಸಾರ ನಡೆಸುತ್ತಿರುವ ಹಾಗೂ ಮಠದ ಆಸ್ತಿಯನ್ನು ಪರಬಾರೆ ಮಾಡಿರುವ ಆರೋಪಗಳೂ ಕೇಳಿ ಬರುತ್ತಿದೆ.