ರಾಯಚೂರು ಅ 26: 5ನೇ ಬಾರಿಯೂ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ನ್ಯಾಯಧೀಶರು ಸಂಜೆ ಐದು ಗಂಟೆವರೆಗೆ ನ್ಯಾಯಾಲಯದಲ್ಲೇ ಕುಳಿತುಕೊಳ್ಳುವಂತೆ ಶಿಕ್ಷೆ ನೀಡಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಹಿನ್ನೆಲೆಯಲ್ಲಿ 5ನೇ ಬಾರಿಯೂ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು. ಕೊನೆಗೂ ರಾಯಚೂರಿನ ಜೆಎಂಎಫ್ಸಿ 2ನೇ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರುವ ಪೂಜಾಗಾಂಧಿಗೆ ನ್ಯಾಯಧೀಶರು ಸಂಜೆಯ ತನಕ ಅಲ್ಲೇ ಕುಳಿತುಕೊಳ್ಳುವಂತೆ ಶಿಕ್ಷೆ ನೀಡಿದ್ದಾರೆ. ಹೀಗಾಗಿ ಮದ್ಯಾಹ್ನ ಊಟ ಇಲ್ಲದೆ ಚಾಕ್ಲೇಟ್ ತಿಂದು ಪೂಜಾ ಗಾಂಧಿ ಸಮಯ ಕಳೆದಿದ್ದಾರೆ. ಜತೆಗೆ ಸಂಜೆ ವೇಳೆಗೆ ಷರತ್ತುಬದ್ಧ ಜಾಮೀನು ಪೂಜಾ ಗಾಂಧಿಗೆ ಸಿಗದಿದ್ದರೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆಗಳಿವೆ.ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರು. ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.