ಮಂಗಳೂರು, ಜ 31(): ಸೀರಿಯಲ್ ಕಿಲ್ಲರ್ ಸೈನೆಡ್ ಮೋಹನ್ ಗೆ 6ನೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರು 6ನೇ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಧೀಶ ಡಿಟಿ ಪುಟ್ಟರಂಗಸ್ವಾಮಿ ಆರೋಪಿ ಸೈನೆಡ್ ಮೋಹನ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಬೆಳಗಾವಿಯ ಹಿಂಡಲಗಾ ಜೈಲ್ ನಲ್ಲಿರುವ ಸೈನೆಡ್ ಮೋಹನ್ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗಿತ್ತು. ವಿಚಾರಣೆಯ ಬಳಿಕ ಆರೋಪಿಗೆ ವಿಕ್ಷೆಯನ್ನು ಪ್ರಕಟಿಸಲಾಗಿದೆ.
ಸುಮಾರು 10 ವರ್ಷಗಳ ಹಿಂದೆ 2009ರಲ್ಲಿ ಸೀರಿಯಲ್ ಕಿಲ್ಲರ್, ಬಂಟ್ವಾಳದ ಮಿತ್ತೂರಿನ ಯುವತಿಯನ್ನು ಮೈಸೂರು ಬಸ್ ಸ್ಟ್ಯಾಂಡ್ ನಲ್ಲಿ ಕೊಲೆ ಮಾಡಿದ್ದ. ಈ ಕೊಲೆಗೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.
ಈ ಪ್ರಕರಣ ಸೇರಿದಂತೆ ಸುಮಾರು 20 ಯುವತಿಯರ ಹತ್ಯೆಯನ್ನು ಆರೋಪಿ ನಡೆಸಿದ್ದಾನೆ.