ಕಾಸರಗೋಡು,ಅ 26 : ಪಡಿತರ ಅಂಗಡಿ ಮೂಲಕ ಗ್ರಾಹಕರಿಗೆ ಮಾರಾಟ ಮಾಡಬೇಕಾದ ನೀಲಿ ಸೀಮೆಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೋರ್ವನನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಚೆಂಗಳ ಸಂತೋಷ್ ನಗರದ ಟಿ . ಎ ಮುಹಮ್ಮದ್ ಕು೦ಞ (50) ಎಂದು ಗುರುತಿಸಲಾಗಿದೆ.ಪಡಿತರ ಅಂಗಡಿಗಳಲ್ಲಿ ಮಾತ್ರ ಮಾಡಲಾಗುವ ಸೀಮೆ ಎಣ್ಣೆ ಈತನಿಗೆ ಹೇಗೆ ಲಭಿಸಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಅಂಗಡಿಗೆ ದಾಳಿ ನಡೆಸಿದ ಪೊಲೀಸರು ತಪಾಸಣೆ ನಡೆಸಿದಾಗ ಅಕ್ರಮ ಪತ್ತೆಯಾಗಿದೆ. 22 ಲೀಟರ್ ಸೀಮೆ ಎಣ್ಣೆ ಯನ್ನು ವಶಪಡಿಸಿಕೊಳ್ಳಲಾಗಿದೆ.ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ .