ಮಂಗಳೂರು ಅ27: ಪಾನಮತ್ತನಾಗಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ವಕ್ತಿಯೋರ್ವರನ್ನು ದಾರಿಹೋಕರೊಬ್ಬರು ರಕ್ಷಿಸಿದ ಘಟನೆ ನಿನ್ನೆ ರಾತ್ರಿ ಉಲ್ಲಾಲದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶ್ರಮಿಸಿದ ವೆಕ್ತಿಯನ್ನು ಪಡೀಲ್ ನಿವಾಸಿಯಾಗಿರುವ ದಯಾನಂದ (48)ಎಂದು ಗುರುತಿಸಲಾಗಿದೆ.
ದಯಾನಂದರು ಸೇತುವೆಯ ಬಳಿಬಂದು ನದಿಗೆ ಧುಮುಕುವಷ್ಟರಲ್ಲಿ ಅದೇ ಮಾರ್ಗವಾಗಿ ಬಂದ ಬೈಕ್ ಸವಾರೊಬ್ಬರು ತಕ್ಷಣ ಕಾರ್ಯಪ್ರವೃತ್ತರಾಗಿ ರಕ್ಷಣಾ ಕಾರ್ಯಕ್ಕೆ ಮುಂದಾಗಿ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾದರು.ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಬೈಕ್ ಸವಾರನಿಗೆ ರಕ್ಷಣಾ ಕಾರ್ಯದಲ್ಲಿ ಸಾಥ್ ನೀಡಿದರು.
ಉಲ್ಲಾಲ್ ಪೋಲಿಸರು ಸ್ಥಳಕ್ಕಾಗಮಿಸಿ ವರದಿ ಪಡೆದ ನಂತರ ಆತ್ಮಹತ್ಯಾ ಶ್ರಮ ಕೇಸು ಧಾಕಲಿಸಿಕೊಂಡರು.