ಮಂಗಳೂರು, ಫೆ 02(SM): ಪಣಂಬೂರಿನ ಕೂರಿಕಟ್ಟ ಗೇಟ್ ಬಳಿ ನಾಲ್ಕು ದನಗಳು ಮೃತಪಟ್ಟ ಘಟನೆ ನಡೆದಿದೆ. ಯೂರಿಯಾ ಅಥವಾ ಪೊಟಾಶಿಯಂ ಮಿಶ್ರಿತ ನೀರು ಸೇವಿಸಿ ಈ ದನಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ.
ಯೂರಿಯಾ, ಪೊಟಾಶಿಯಂಗಳು ರಾಸಾಯನಿಕ ಉದ್ಯಮಗಳಿಗೆ ಕಚ್ಚಾವಸ್ತುಗಳಾಗಿ ಸರಬರಾಜು ಆಗುವ ಸಂದರ್ಭ ಬಿದ್ದು ನೀರಿನಲ್ಲಿ ಮಿಶ್ರವಾಗಿರಬಹುದು. ಇದನ್ನು ಜಾನುವಾರುಗಳು ಕುಡಿದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ಗೋ ರಕ್ಷಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.