ಮಂಗಳೂರು ಅ27: ಅಕ್ಟೋಬರ್ 29 ರಂದು ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಅವರು ಸಂಚರಿಸಲಿರುವ ವಿಶೇಷ ಕಾರು ವಾಯುಪಡೆಯ ಪ್ರತ್ಯೇಕ ವಿಮಾನದಲ್ಲಿ ಇಂದು ಮಂಗಳೂರಿಗೆ ಬಂದಿಳಿಯಿತು.
ಪ್ರಧಾನಿ ಮೋದಿ ಆದಿತ್ಯವಾರ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾನಕ್ಕೆ ಆಗಮಿಸಿ ಅಲ್ಲಿಂದ ರಸ್ತೆ ಮಾರ್ಗ ಮೂಲಕ ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಧರ್ಮಸ್ಥಳ ಮಂಜುನಾಥ ದೇವರ ಸನ್ನಿಧಿಯ ಭೇಟಿಯ ನಂತರ ಉಜಿರೆ ರತ್ನವರ್ಮ ಹೆಗ್ಗಡೆ ಮೈದಾನದಲ್ಲಿ ಪ್ರಧಾನಿಯವರು ಸಾರ್ವಜಣಿಕರನ್ನು ಉದ್ದೇಶಿಸಿ ಮಾತಾನಾಡಲಿದ್ದಾರೆ. ಮೈದಾನದ ಹತ್ತಿರದಲ್ಲೇ ಪ್ರಧಾನಿಗೆ ತಾತ್ಕಾಲಿಕ ಕಛೇರಿಯೊಂದನ್ನು ನಿರ್ಮಿಸಲಾಗಿದೆ. ಪ್ರಧಾನ ಮಂತ್ರಿಗಳ ಭಾಷಣದ ನೇರಪ್ರಸಾರಕ್ಕೂ ಅಗತ್ಯವಾದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಸಾರ್ವಜಣಿಕರಿಗೆ ವಿಶೇಷ ತಪಾಸಣೆಯ ಮೂಲಕ ಮಾತ್ರವೇ ಮೈದಾನದ ಒಳಗೆ ಹೋಗಲು ಅನುಮತಿ ನೀಡಲಾಗುವುದು. ನೀರಿನ ಬಾಟ್ಲಿಗಳನ್ನು ಮೈದಾನದ ಒಳಗೆ ಕೊಂಡೊಯ್ಯುವಂತಿಲ್ಲ. ಪ್ರಧಾನಿ ಕಾರ್ಯಕ್ರಮ ನೇರವಾಗಿ ವೀಕ್ಷಿಸಲು ತೆರಳುವವರು ಕಡ್ಡಾಯವಾಗಿ ಅಧಾರ್ ಕಾರ್ಡನ್ನು ಕೊಂಡೊಯ್ಯಬೇಕಾಗಿದೆ. ಸಭೆಗೆ ಸುಮಾರು ಒಂದು ಲಕ್ಷ ಜನ ಸೇರಲಿದ್ದಾರೆಂದು ವಿವಿಧ ಮೂಲಗಳಿಂದ ತಿಳಿದು ಬಂದಿದೆ.