ಮಂಗಳೂರು, ಫೆ 06(SM): ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ವಿನೂತನ ಪರಿಕಲ್ಪನೆಯಂತೆ ನಗರದಲ್ಲಿ ಪ್ರತೀ ಬುಧವಾರದಂದು ನೋ ಹಾರ್ನ್ ಡೇಯನ್ನು ಆಚರಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಶಾಲಾ ವಿದ್ಯಾರ್ಥೀಗಳ ಜೊತೆಗೆ ಸೇರಿಕೊಂಡು ಬುಧವಾರದಂದು ನಗರದ ಅಂಬೇಡ್ಕರ್ ಸರ್ಕಲ್ ಬಳಿ ಹಾರ್ನ್ ಹೊಡೆದು ಕಿರಿಕಿರಿಯನ್ನುಂಟು ಮಾಡುವ ಹಲವರಿಗೆ ಗುಲಾಬಿ ನೀಡಿದರು. ಹಾಗೂ ಮುಂದಿನ ದಿನಗಳಲ್ಲಿ ಪ್ರತಿ ಬುಧವಾರ ಹಾರ್ನ್ ಹೊಡೆಯುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು.
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಲು ಈ ಒಂದು ಅಭಿಯಾನ ನಿಜಕ್ಕೂ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಪಕ್ಷದ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ.