ಮಂಗಳೂರು, ಅ 27: ಮೊದಲ ದಿನವೇ ಹೌಸ್ಫುಲ್ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದ ಅರೆಮರ್ಲೆರ್ ತುಳು ಹಾಸ್ಯ ಸಿನಿಮಾವನ್ನು ಮಂಗಳೂರಿನ ಪ್ರಭಾತ್ ಚಿತ್ರಮಂದಿರದಿಂದ ತೆಗೆದಿರುವುದಕ್ಕೆನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಬಾಕ್ಸ್ ಅಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಆದರೆ ಏಕಾಏಕಿಯಾಗಿ ಚಿತ್ರವನ್ನು ಪ್ರಭಾತ್ ಚಿತ್ರಮಂದಿರದಿಂದ ತೆಗೆದಿರುವುದಕ್ಕೆ ನಿರ್ದೇಶಕ ದೇವದಾಸ್ ಕಾಪಿಕಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
11 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದ್ದ ಅರೆಮರ್ಲೆರ್ ತುಳು ಹಾಸ್ಯ ಸಿನಿಮಾವನ್ನು 7ನೇ ವಾರದಲ್ಲಿ ಚಿತ್ರಮಂದಿರದಿಂದ ತೆಗೆಯಲಾಗಿದೆ. ಪ್ರಭಾತ್ ಚಿತ್ರಮಂದಿರದ ಮಾಲಕನಲ್ಲಿ ಚಿತ್ರ ತಂಡ ಸಿನಿಮಾವನ್ನು ತೆಗೆಯದಂತೆ ಒತ್ತಾಯಿಸಿದರ ಅರೆಮರ್ಲೆರ್ ಚಿತ್ರವನ್ನು ತೆಗೆದುಹಾಕಿದ್ದಾರೆ.
ಸ್ಪೈಡರ್ ಅನ್ನುವ ತೆಲುಗು ಚಿತ್ರಕ್ಕೆ ಚಿತ್ರಮಂದಿರದಲ್ಲಿ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ತುಳು ಚಿತ್ರವೊಂದಕ್ಕೆ ಅವಮಾನ ಮಾಡಿರೋದು ಸರಿಯಲ್ಲ ಅನ್ನೋದು ತುಳು ಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್ ಅಭಿಪ್ರಾಯ.
ಪ್ರಭಾತ್ ಹೊರತುಪಡಿಸಿ ಸಿನಿಪೊಲಿಸ್, ಬಿಗ್ ಸಿನೆಮಾಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ನಟರಾಜ್, ಭಾರತ್, ಸಂತೋಷ್ ಹಾಗೂ ಐನಾಕ್ಸ್ ಹೀಗೆ 11 ಚಿತ್ರಮಂದಿರದಲ್ಲಿ ತೆರೆ ಕಂಡಿರುವ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಸಂದರ್ಭ ರಾಜೇಶ್ ಬ್ರಹ್ಮಾವರ್, ಶರ್ಮಿಳಾ ಕಾಪಿಕಾಡ್, ಜಗನ್ನಾಥ್ ಶೆಟ್ಟಿ ಬಾಳ ಉಪಸ್ಥಿತರಿದ್ದರು.